ಶುಕ್ರವಾರ, ಜೂನ್ 19, 2015

ಹುಲಿಹೈದರ್ ಚಲೋ




ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ

(PÉÆ¥Àà¼À, gÁAiÀÄZÀÆgÀÄ, §¼Áîj)
ºÀÄ°ºÉÊzÀgï ZÀ¯ÉÆÃ
¢£ÁAPÀ. 24.06.2015gÀAzÀÄ §ÄzsÀªÁgÀ, ¨É.11UÀAmÉ.
¦æAiÀÄgÉ;

zÀ°vÀgÀÆ ¸ÀªÀiÁ£ÀvÉ, ¸Áé©üªÀiÁ£À UËgÀªÀUÀ½AzÀ §zÀÄPÀĪÀAvÁUÀ¨ÉÃPÀÄ. gÁdQÃAiÀÄ ¨sÀæμÁÖZÁgÀªÀ£ÀÄß d£À¸ÁªÀiÁ£Àå£ÀÆ ¥Àæ²ß¸ÀĪÀAvÁUÀ¨ÉÃPÀÄ. E®èªÉAzÀgÉ ¥ÀæeÁ¥Àæ¨sÀÄvÀéªÀÇ E®èªÉAzÉà CxÀð. DzÀgÉ PÉÆ¥Àà¼À f¯ÉèAiÀÄ°è £ÀqÉAiÀÄÄwÛgÀĪÀ «zsÀåªÀiÁ£ÀUÀ¼À£ÀÄß UÀªÀĤ¹zÀgÉ ¸ÀA«zsÁ£ÀzÀ D±ÀAiÀÄUÀ¼À£ÀÄß §AzsÀ£ÀzÀ°èqÀ¯ÁVzÉ, ¥ÀæeÁ¥Àæ¨sÀÄvÀéªÉA§ÄzÀÄ ¨Á®UÀæºÀ ¦ÃqɬÄAzÀ E£ÀÆß ©qÀÄUÀqÉ ¥ÀqÉ¢®è JA§ÄzÀÄ ªÀÄ£ÀªÀjPÉAiÀiÁUÀÄvÀÛzÉ. AiÀiÁjAzÀ »ÃUÁUÀÄwÛzÉ JA§ÄzÀ£ÀÄß ¥Àæ²ß¹PÉÆAqÀgÉ, F f¯ÉèAiÀÄ UÁæªÀÄUÀ¼À°è £ÀqÉzÀ WÀl£ÉUÀ¼Éà w½ªÀ½PÉAiÀÄ£ÀÄß ¤ÃqÀÄvÀÛªÉ.

ºÉƸÀUÀÄqÀØ UÁæªÀÄzÀ ºÀ£ÀĪÀĪÀé. §qÀ, zÀ°vÀ ºÉtÄÚªÀÄUÀ¼ÀÄ. FPÉAiÀÄ ºÉt C£ÁxÀ ¹ÜwAiÀÄ°è ¥ÀvÉÛAiÀiÁ¬ÄvÀÄ. £ÉÆÃrzÀ AiÀiÁjUÉà DUÀ° CzÀÄ PÉÆ¯É JA§ÄzÀÄ w½AiÀÄÄwÛvÀÄÛ. DzÀgÉ PÉƯÉUÀqÀÄPÀgÀÄ AiÀiÁgÉAzÀÄ ¥ÉÆ°Ã¸ï ¥ÀvÉÛzÁjPÉAiÀÄ PÀtÂÚUÉ ©Ã¼À°®è. £ÁåAiÀiÁ®AiÀÄzÀ ¨ÁAiÀÄ°è wÃ¥ÀÄð §gÀ°®è.

ªÀÄgÀPÀÄA© ªÀÄvÀÄÛ ¨ÉÆÃZÀ£ÀºÀ½îUÀ¼À°èè zÀ°vÀjUÉ PËëgÀªÀ£ÀÆß ªÀiÁqÀUÉÆqÀzÀ ªÉÄïÁÓw ¸ÀªÀÄÄzÁAiÀÄ zÀ°vÀgÀ §zÀÄPÀĪÀ ºÀPÀÌ£Éßà PÀ¹zÀÄPÉÆArzÉ. ªÀÄgÀPÀÄA©AiÀÄ°è zÀ°vÀ £ÁAiÀÄPÀvÀéªÀ£ÀÄß ªÀÄ£À§AzÀAvÉ xÀ½¸À¯ÁVzÉ. UÁæªÀÄzÀ zÀ°vÀ ¸ÀªÀÄÄzÁAiÀÄ CWÉÆövÀ ±Á±ÀévÀ §»μÁÌgÀªÀ£ÀÄß C£ÀĨsÀ«¸ÀÄwÛzÉ.

PÀ¯Á®§Ar UÁæªÀÄzÀ zÀ°vÀjUÉ ªÉÄÊQ£À ªÀÄÆ®PÀ gÁeÁgÉÆÃμÀªÁV §»μÁÌgÀªÀ£ÀÄß ¸ÁgÀ¯ÁVzÉ. CªÀgÀ PÉÃjAiÀÄ gÀ¸ÉÛUÉ CqÀتÁV ªÀÄļÀÄîvÀAwAiÀÄ£ÀÄß drAiÀÄĪÀμÀÄÖ zÀ¥ÀðªÀ£ÀÄß ªÉÄïÁÓw ¸ÀªÀÄÄzÁAiÀÄ vÉÆÃj¹zÉ. §»μÁÌgÀzÀ ¥ÀjuÁªÀĪÁV zÀÄrzÀÄtÄÚªÀ zÀ°vÀgÉ®è PÉ®¸À«®èzÉà PÀÆwzÁÝgÉ, «zsÁåªÀAvÀ AiÀÄĪÀPÀgÀÄ ºÉÆmÉÖ¥ÁrUÁV ªÀĺÁ£ÀUÀgÀUÀ½UÉ ªÀ®¸É ºÉÆÃUÀĪÀAvÁVzÉ.

»gÉÃSÉÃqÀzÀ°èAiÀÄÆ zÀ°vÀ PÀÄlÄA§UÀ¼À£ÀÄß §»μÀÌj¸À¯ÁVzÉ. PÀȶ PÀÆ°PÁgÀ zÀ°vÀgÀÄ vÀªÀÄä ¸ÀAWÀzÀ ¨ÉÆÃqïð ºÁPÀ®Æ CrØ¥Àr¸À¯ÁVzÉ. C°è£À PÀÄlÄA§UÀ¼ÀÄ FUÀ®Æ DvÀAPÀzÀ°èªÉ.

ºÀÄ°ºÉÊzÀgï, d£À¸ÁªÀiÁ£ÀågÉ ºÉaÑgÀĪÀ UÁæªÀÄ. ¸ÀtÚºÀ£ÀĪÀÄAvÀ¥Àà F UÁæªÀÄzÀ zÀ°vÀ AiÀÄĪÀPÀ. £ÁåAiÀÄ PÉýzÀ ªÀĺÁ¥ÀgÁzsÀPÁÌV gËr gÁdPÁgÀtÂAiÀÄ ¥ÀqÉ FvÀ£À£ÀÄß PÉÆ®è¯ÉA§AvÉ §AvÀÄ. DzÀgÉ ¸ÀܼÀzÀ¯Éèà EzÀÝ ªÀÄÄUÀÝ ºÀĸÉãÀ¥Àà£À£ÀÄß ¤zÀðAiÀĪÁV §rUɬÄAzÀ ºÉÆqÉzÀÄ zÀÄrzÀÄtÄÚªÀ F §qÀªÀ£À PÉÊ ªÀÄÄjzÀÄ vÀ½î ¥ÀgÁjAiÀiÁ¬ÄvÀÄ.

PÀ£ÀPÁ¥ÀÄgÀzÀ AiÀįÁè°AUÀ. E£ÀÆß ºÀ¢£ÉüÀÄ ªÀμÀðzÀ J¼É AiÀÄĪÀPÀ. UÁæªÀÄzÀ PÁªÀÄUÁjUÀ¼À°è £ÀqÉzÀ ¨sÀæμÀÖvÉ §UÉÎ, MAzÉà MAzÀÄ ªÀiÁvÀÄ në PÁåªÉÄgÁ ªÀÄÄAzÉ ºÉýzÀ. CμÀÖPÉÌà DvÀ ºÉtªÁV ºÉÆÃzÀ. DvÀ£À£ÀÄß CmÁÖr¹PÉÆAzÀÄ ºÉtªÀ£ÀÄß gÉ樀 ºÀ½UÀ¼À ªÉÄÃ¯É ©¸ÁqÀ¯ÁAiÀÄÄÛ, JA§ÄzÀ£ÀÄß ¸Á©ÃvÀÄ¥Àr¸À®Ä ªÀĺÁ vÀ¤SÉAiÀÄ CUÀvÀåªÉà E®èzÀμÀÄÖ ¤ZÀѼÀ DzsÁgÀUÀ½ªÉ. DzÀgÀÆ PÉƯÉUÀqÀÄPÀgÀ £ÁAiÀÄPÀ£À PÉÆgÀ¼À ¥ÀnÖUÉ PÉʺÁPÀ®Ä ¥ÉÆ°Ã¸ï ªÀåªÀ¸ÉÜV£ÀÆß ±ÀQÛ ¸Á®ÄwÛ®è. PÉƯÉUÀqÀÄPÀ ¥ÀqÉAiÀÄ zÀ¥Àð«£ÀÆß vÀVήè. EªÉ®è AiÀiÁªÀÅzÉÆà PÁ®zÀ, AiÀiÁªÀÅzÉÆà gÁdå-zÉñÀUÀ¼À PÀxÉAiÀÄ®è. £ÁªÀÅ §zÀÄPÀÄwÛgÀĪÀ PÉÆ¥Àà¼À f¯ÉèAiÀÄ ªÀvÀðªÀiÁ£ÀzÀ ªÁ¸ÀÛªÀ. £Á«zÀ£ÀÄß ¥Àæ²ß¸ÀĪÀÅzÀÄ ¨ÉÃqÀªÉ ?

£ÁªÀÅ, JAzÀgÉ; f¯Éè-£Ár£À ¥ÀæeÁÕªÀAvÀgÀÄ, ªÀÄ£ÀÄμÀåvÀé EgÀĪÀªÀgÀÄ, £ÁåAiÀÄzÀ ¥ÀPÀë¥ÁwUÀ¼ÀÄ. D §½PÀ, ¸ÀA«zsÁ£ÀzÀ ªÀÄË®åUÀ¼À£ÀÄß JwÛ»rAiÀÄĪÀªÀgÀÄ, ¥ÀæeÁ¥Àæ¨sÀÄvÀézÀ ¸ÀªÀiÁd ¤ªÀiÁðtªÁUÀ¨ÉÃPÉAzÀÄ §AiÀĸÀĪÀªÀgÀÄ. £ÁªÀÅ F gËrvÀ£ÀªÀ£ÀÄß eÉÊ°UÉ ºÁQ JAzÀÄ ©Ã¢AiÀÄ°è ºÉÆÃgÁl ªÀiÁqÀÄwÛzÀÝgÉ CvÀÛ ¥ÀæeÁ¥Àæw¤¢üUÀ¼ÀÄ vÀªÀÄä M¼ÀªÀÄ£ÉAiÀÄ°è C¥ÀgÁ¢üUÀ½UÉ D±ÀæAiÀÄ ¤ÃrzÀgÉ £ÁªÀÅ ¸ÀĪÀÄä£É PÀÆqÀ¨ÉÃPÉ? ºÁUÁzÀgÉ F gËr¥ÀqÉAiÀÄ £ÁAiÀÄPÀ£À£ÀÄß §A¢ü¸À®Ä F vÀ£ÀPÀªÀÇ ¸ÁzsÀåªÁV®èªÉAzÀgÉ £ÁªÀÅ ¥ÀæeÁÕªÀAvÀgÉAzÀÄ ºÉýPÉƼÀî®Æ £ÁaPÉAiÀiÁUÀĪÀAvÀºÀ ¸ÀAzÀ¨sÀð §gÀ¨ÁgÀzÀÄ. £ÁUÀjPÀgÉAzÀgÉ §jà ZÀÄ£ÁªÀuÉ PÁ®zÀ NlÄUÀ¼ÀÄ JAzÀÄ gÁdPÁgÀtÂUÀ¼ÀÄ £ÀªÀÄä£ÀÄß CtQ¸ÀĪÀAvÁUÀ¨ÁgÀzÀÄ. d£À±ÀQÛ ©Ã¢V½zÀgÉ C¢üPÁgÀzÀ PÀÄaðUÀ¼ÀÄ ªÀÄÄjzÀÄ ©Ã¼ÀÄvÀÛªÉ, PÉÆ©âzÀ UÀƽ, vÉÆüÀUÀ¼ÀÆ eÉÊ°£À ªÉÄêÀÅ w£ÀߨÉÃPÁUÀÄvÀÛzÉ JA§ÄzÀ£ÀÄß ¸Á©ÃvÀÄ ¥Àr¸À¨ÉÃPÀÄ. ªÀÄ£À¸ÁìQë EgÀĪÀ ªÀÄ£ÀÄμÀågÉ®ègÀÆ EAvÀºÀ ºÉÆÃgÁlPÉÌ ªÀÄÄAzÁUÀ¨ÉÃPÀÄ.

“C»AzÀ J£ÀÄߪÀÅzÀÄ C®à¸ÀASÁåvÀ, »AzÀĽzÀ ºÁUÀÆ zÀ°vÀ ¸ÀªÀÄÄzÁAiÀÄUÀ¼À£ÀÄß ¸ÀAAiÉÆÃf¸ÀĪÀ ZÀ¼ÀªÀ½ gÁdPÁgÀtzÀ ¸ÀÆZÀPÀ” JAzÉà £Ár£À aAvÀPÀgÀ UÀæ»PÉAiÀiÁVvÀÄÛ. DzÀgÉ £ÀªÀÄä £ÀqÀÄ«£À ªÁ¸ÀÛªÀUÀ¼ÀÄ C»AzÀ J£ÀÄߪÀÅzÀÄ C¢üPÁgÀ gÁdPÁgÀtzÀ ªÀiÁUÀðªÀiÁvÀæ JAzÀÄ ªÀÄ£ÀUÁt¹ªÉ. C»AzÀ ¸ÀªÀÄÄzÁAiÀÄUÀ¼À ¨ÉA§®¢AzÁV C¢üPÁgÀPÉÌ §AzÀ ¹zÀÝgÁªÀÄAiÀÄå £ÉÃvÀÈvÀézÀ ¸ÀgÀPÁgÀ C»AzÀ eÁw »£É߯ÉAiÀÄ G¼ÀîªÀgÀÄ E£ÀßμÀÄÖ ²æêÀÄAvÀgÁUÀÄwÛgÀĪÀÅzÀÄ §qÀ ¥ÀjªÁgÀUÀ¼ÀÄ C»AzÀzÀ §°μÀ×jAzÀ zÀªÀÄ£ÀQÌÃqÁVgÀĪÀÅzÀÄ F ªÉÄð£À WÀl£ÉUÀ¼ÀÄ ¸Á©ÃvÀÄ¥Àr¹ªÉ. ªÀÄÄRåªÀÄAwæUÀ¼ÀÄ F WÀl£ÉUÀ½UÉ GvÀÛgÀzÁ¬Ä DUÀ¨ÉÃQzÉ.
gÁdåzÀ ©eɦ £ÁAiÀÄPÀgÀÄ £ÉÆAzÀªÀgÀ ¸ÀAPÀμÀÖªÀ£ÀÄß vÀªÀÄä gÁdPÁgÀtPÉÌ §¼À¹PÉƼÀÄîwÛgÀĪÀÅzÀÄ JzÀÄÝ PÁt¹zÉ. PÀ¯Á®§ArAiÀÄ°è §»μÀÌj¸À®àlÖ zÀ°vÀjUÉ ¸ÀàA¢¸ÀzÀ ©eɦ ±Á¸ÀPÀ zÉÆqÀØ£ÀUËqÀ ¥ÁnÃ¯ï §ºÀĸÀASÁåvÀ(ªÀÄvÀ)gÁzÀ UÁæªÀÄzÀ ªÉÄïÁÓwUÀ¼À ¥ÀgÀªÀ»¹zÁÝgÉ. f¯Éè-£Ár£À vÀÄA§ £ÀqÉAiÀÄÄwÛgÀĪÀ zÀ°vÀgÀ ªÉÄð£À zËdð£ÀåUÀ¼À §UÉÎ ªÀiË£ÀªÀ»¹zÀ ©eɦ AiÀįÁè°AUÀ£À ºÀvÉå §UÉÎ CμÉÖ £ÁlQÃAiÀÄ PÁ¼Àf vÉÆÃgÀÄwÛgÀĪÀÅzÀÄ D ¥ÀPÀëzÀ zÀ°vÀ gÁdPÁgÀtzÀ vÀAvÀæUÁjPÉUÉ »rzÀ PÉÊUÀ£ÀßrAiÀiÁVzÉ. FUÁUÀ¯Éà ¥ÀæUÀw¥ÀgÀ ¸ÀAWÀl£ÉUÀ¼À ºÉÆÃgÁlzÀ ¥ÀjuÁªÀĪÁV ºÉÆgÀºÉÆ«ÄäzÀ d£ÀvÉAiÀÄ DPÉÆæñÀªÀ£ÀÄß zÀħð¼ÀPÉ ªÀiÁrPÉƼÀÄîªÀ CªÀPÁ±ÀªÁzÀ gÁdPÁgÀtPÉÌ ©eɦ ªÀÄÄAzÁVzÉ. D¼ÀĪÀ ªÀÄvÀÄÛ «gÉÆâü¸ÀĪÀ gÁdPÁgÀtÂUÀ¼À £ÀqÀvÉUÀ¼À »A¢£À ºÀÄ£ÁßgÀªÀ£ÀÄß d£ÀvÉ CxÉÊð¹PÉƼÀî¨ÉÃQzÉ.

¥ÀwæPÁ ªÀiÁzsÀåªÀÄ, PÀ¼ÉzÉÆAzÀÄ wAUÀ½AzÀ ¥Àæw¤vÀå JA§AvÉ J¼ÉJ¼ÉAiÀiÁV F zËdð£ÀåzÀ «ªÀgÀUÀ¼À£ÀÄß ©r¹nÖzÉ. zÀȱÀå ªÀiÁzsÀåªÀÄUÀ¼ÀÄ, £ÉÆAzÀªÀgÀÄ PÀtÂÚÃgÀÄ ¸ÀÄj¸ÀĪÀ zÀȱÀåUÀ¼À£ÀÄß ¥Àæ¸ÁgÀ ªÀiÁrªÉ. ¸ÀA«zsÁ£ÀzÀ £Á®Ì£É CAUÀ JAzÉà d£ÀªÀiÁ£ÀåvÉAiÀÄ£ÀÄß ¥ÀqÉzÀ ªÀiÁzsÀåªÀÄ gÀAUÀ FUÁUÀ¯Éà ©vÀÛj¹zÀAvÉ, gËr²Ãlgï ºÀ£ÀĪÉÄñÀ£ÁAiÀÄPÀ JA§ ªÀåQÛ F J®è zÀÄμÀÌøvÀåUÀ¼À PÉÃAzÀæªÁVzÁÝ£É. F ¨sÁUÀzÀ d£Á©ü¥ÁæAiÀÄzÀAvÉ Cw PÀrªÉÄ CªÀ¢üAiÀÄ°è £ÀÆgÁgÀÄ PÉÆÃnUÀ¼À MqÉAiÀÄ£ÁV ºÀt§® ªÀÄvÀÄÛ gËr§®UÀ¼À ªÀÄÆ®PÀ gÁdQÃAiÀÄ PÉëÃvÀæzÀ°èAiÀÄÆ »rvÀ ¸Á¢ü¹zÁÝ£É. f¯ÉèAiÀÄ gÁdPÁgÀtzÀ°è »rvÀ ¸Á¢ü¹gÀĪÀ FvÀ gÁdåªÀÄlÖzÀ D¼ÀĪÀ ¥ÀPÀëzÀ gÁdPÁgÀtÂUÀ¼À D¥ÀÛ£ÁVzÁÝ£É. f¯Áè G¸ÀÄÛªÁj ¸ÀaªÀ ²ªÀgÁd vÀAUÀqÀV ¨ÉA§®ªÀÇ FvÀ¤VgÀĪÀÅzÀÄ FUÀ UÀÄmÁÖV G½¢®è. ªÀÄÄRåªÀÄAwæUÀ¼ÀªÀgÉUÉ £ÀAlÄ ºÉÆA¢gÀ§®è FvÀ ¨ÉÃPÁzÀÝ£ÀÄß ªÀiÁr zÀQ̹PÉƼÀÄîªÀ zÀ¥ÀðªÀ£ÀÄß ¸Á©ÃvÀÄ¥Àr¹zÀAvÁVzÉ. EzÀÄ »ÃUÉAiÉÄà ªÀÄÄAzÀĪÀjzÀgÉ PÉÆ¥Àà¼À f¯ÉèAiÀÄ°è ¨sÀÆUÀvÀ ¥ÁvÀPÀ dUÀvÀÄÛ gÀÆ¥ÀÄUÉÆAqÀgÀÆ CZÀÑj¬Ä®è. ¸ÀÄ¥Áj PÉƯÉUÀqÀÄPÀgÀÄ ºÀÄnÖPÉƼÀÄîªÀ ¢£ÀUÀ¼ÀÆ zÀÆgÀ«®è. »ÃUÁUÀzÉÃ, f¯ÉèAiÀÄ°è ±ÁAw ¸ÀĪÀåªÀ¸ÉÜ G½AiÀĨÉÃPÁzÀgÉ;

* gËr²Ãlgï ºÀ£ÀĪÉÄñÀ £ÁAiÀÄPÀ£À£ÀÄß F PÀÆqÀ¯Éà §A¢ü¸À¨ÉÃPÀÄ. 
* FvÀ£À »vÀgÀPÀëPÀgÁVgÀĪÀ f¯Áè G¸ÀÄÛªÁj ¸ÀaªÀ ²ªÀgÁd vÀAUÀqÀV, AiÀįÁè°AUÀ£À ºÀvÉå ªÀÄvÀÄÛ f¯ÉèAiÀÄ°è ºÉZÀÄÑwÛgÀĪÀ zÀ°vÀ zËdð£ÀåUÀ¼À »£É߯ÉAiÀÄ°è gÁf£ÁªÉÄ ¤ÃqÀ¨ÉÃPÀÄ. 
* f¯ÉèAiÀÄ ºÀ®ªÀÅ UÁæªÀÄUÀ¼À°è §»μÁÌgÀQÌÃqÁV £ÉÆA¢gÀĪÀ ¸Á«gÁgÀÄ zÀ°vÀgÀÄ ºÉÆmÉÖ-§mÉÖUÁV ªÀ®¸É ºÉÆÃUÀÄwÛzÀÄÝ, DAiÀiÁUÁæªÀÄUÀ¼À¯Éèà CªÀjUÉ ¥ÀÆtð¥ÀæªÀiÁtzÀ GzÉÆåÃUÀ PÀ°à¹PÉÆqÀ¨ÉÃPÀÄ. 
* FUÀ®Æ eÁjAiÀÄ°ègÀĪÀ C¸Ààø±ÀåvÉAiÀÄ£ÀÄß vÉÆqÉzÀĺÁPÀĪÀ°è f¯ÁèqÀ½vÀ «¥sÀ®ªÁVzÀÄÝ ¸ÀªÀtÂÃðAiÀÄgÉÆA¢UÉ PÀÆr DZÀj¸ÀĪÀ ¸ÁA¸ÀÌøwPÀ AiÉÆÃd£ÉUÀ¼À£ÀÄß gÀƦ¹ eÁjUÉƽ¸À¨ÉÃPÀÄ.
 * f¯ÉèAiÀÄ ±ÁAw ¸ÀĪÀåªÀ¸ÉÜUÉ DvÀAPÀPÁjAiÀiÁVgÀĪÀ ºÀ£ÀĪÉÄñÀ£ÁAiÀÄPÀ£À CPÀæªÀÄ ¸ÀA¥ÁzÀ£ÉAiÀÄ vÀ¤SÉAiÀiÁUÀ¨ÉÃPÀÄ, JAzÀÄ F ªÀÄÆ®PÀ ¸ÀgÀPÁgÀPÉÌ DUÀ滸ÀÄwÛzÉÝêÉ.

§¤ß, zÀÄμÀÖ±ÀQÛUÉ ¥ÀæwAiÀiÁV d£À±ÀQÛAiÀÄ£ÀÄß ¸Á©ÃvÀÄ ¥Àr¸ÉÆÃt. ¢£ÁAPÀ 24.6.2015gÀ UÀÆAqÁVj C½AiÀÄ°- ¥ÀæeÁ¥Àæ¨sÀÄvÀé G½AiÀÄ°, C¸Ààø±ÀåvÉ vÉÆ®UÀ°-ªÀiÁ£À«ÃAiÀÄvÉ ¨É¼ÉAiÀÄ° J£ÀÄߪÀ WÉÆÃμÀzÉÆA¢UÉ ‘ºÀÄ°ºÉÊzÀgï ZÀ¯ÉÆÃ’ ºÉÆÃgÁlªÀ£ÀÄß AiÀıÀ¹éUÉƽ¸ÉÆÃt. ¸Á«gÀ ¸Á«gÀ ¸ÀASÉåAiÀÄ°è ¸ÉÃj ¸ÀgÀPÁgÀPÉÌ JZÀÑjPÉ ¤ÃqÉÆÃt. F ºÉÆÃgÁlzÀ ¸ÁUÀgÀPÉÌ ªÀiÁf ¸ÀaªÉ ©.n.®°vÁ £ÁAiÀÄPÀ, ªÀiÁ£ÀªÀ ºÀPÀÄÌUÀ¼À ºÉÆÃgÁlUÁgÀgÁzÀ ¥ÉÆæ.£ÀUÀgÀUÉgÉ ¨Á§AiÀÄå, mÉæÃqï AiÀÄƤAiÀÄ£ï ¸ÉAlgï D¥sï EArAiÀiÁ (nAiÀÄĹL) gÁeÁåzsÀåPÀëgÁzÀ Dgï.ªÀiÁ£À¸ÀAiÀÄå, ¥Àæ UÀw¥ÀgÀ aAvÀPÀgÁzÀ ªÀÄÄgÀÄWÀ gÁeÉÃAzÀ æ MqÉAiÀÄgï, PÀ£ÁðlPÀ d£À±ÀQÛ CzsÀåQëÃAiÀÄ ªÀÄAqÀ ½AiÀÄ ¸ÀzÀ¸ÀågÁzÀ ¥ÉÆæ.£ÀUÀgÀUÉgÉ gÀªÉ ÄñÀ CªÀgÀÄ ¥Á¯ÉÆμÀî°zÁÝgÉ.
¸ÀA¥ÀPÀð : 9740757550, 9448633710, 8105900527, 7353770201

ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ
(ಕೊಪ್ಪಳ, ರಾಯಚೂರು, ಬಳ್ಳಾರಿ)
ಹುಲಿಹೈದರ್ ಚಲೋ
ದಿನಾಂಕ. ೨೪.೦೬.೨೦೧೫ರಂದು ಬುಧವಾರ, ಬೆ.೧೧ಗಂಟೆ.
ಪ್ರಿಯರೆ;
ದಲಿತರೂ ಸಮಾನತೆ, ಸ್ವಾಭಿಮಾನ ಗೌರವಗಳಿಂದ ಬದುಕುವಂತಾಗಬೇಕು. ರಾಜಕೀಯ ಭ್ರಷ್ಟಾಚಾರವನ್ನು ಜನಸಾಮಾನ್ಯನೂ ಪ್ರಶ್ನಿಸುವಂತಾಗಬೇಕು. ಇಲ್ಲವೆಂದರೆ ಪ್ರಜಾಪ್ರಭುತ್ವವೂ ಇಲ್ಲವೆಂದೇ ಅರ್ಥ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಧ್ಯಮಾನಗಳನ್ನು ಗಮನಿಸಿದರೆ ಸಂವಿಧಾನದ ಆಶಯಗಳನ್ನು ಬಂಧನದಲ್ಲಿಡಲಾಗಿದೆ, ಪ್ರಜಾಪ್ರಭುತ್ವವೆಂಬುದು ಬಾಲಗ್ರಹ ಪೀಡೆಯಿಂದ ಇನ್ನೂ ಬಿಡುಗಡೆ ಪಡೆದಿಲ್ಲ ಎಂಬುದು ಮನವರಿಕೆಯಾಗುತ್ತದೆ. ಯಾರಿಂದ ಹೀಗಾಗುತ್ತಿದೆ ಎಂಬುದನ್ನು ಪ್ರಶ್ನಿಸಿಕೊಂಡರೆ, ಜಿಲ್ಲೆಯ ಗ್ರಾಮಗಳಲ್ಲಿ ನಡೆದ ಘಟನೆಗಳೇ ತಿಳಿವಳಿಕೆಯನ್ನು ನೀಡುತ್ತವೆ.

ಹೊಸಗುಡ್ಡ ಗ್ರಾಮದ ಹನುಮವ್ವ. ಬಡ, ದಲಿತ ಹೆಣ್ಣುಮಗಳು. ಈಕೆಯ ಹೆಣ ಅನಾಥ ಸ್ಥಿತಿಯಲ್ಲಿ ಪತ್ತೆಯಾಯಿತು. ನೋಡಿದ ಯಾರಿಗೇ ಆಗಲಿ ಅದು ಕೊಲೆ ಎಂಬುದು ತಿಳಿಯುತ್ತಿತ್ತು. ಆದರೆ ಕೊಲೆಗಡುಕರು ಯಾರೆಂದು ಪೊಲೀಸ್ ಪತ್ತೆದಾರಿಕೆಯ ಕಣ್ಣಿಗೆ ಬೀಳಲಿಲ್ಲ. ನ್ಯಾಯಾಲಯದ ಬಾಯಲ್ಲಿ ತೀರ್ಪು ಬರಲಿಲ್ಲ.

ಮರಕುಂಬಿ ಮತ್ತು ಬೋಚನಹಳ್ಳಿಗಳಲ್ಲ್ಲಿ ದಲಿತರಿಗೆ ಕ್ಷೌರವನ್ನೂ ಮಾಡಗೊಡದ ಮೇಲ್ಜಾತಿ ಸಮುದಾಯ ದಲಿತರ ಬದುಕುವ ಹಕ್ಕನ್ನೇ ಕಸಿದುಕೊಂಡಿದೆ. ಮರಕುಂಬಿಯಲ್ಲಿ ದಲಿತ ನಾಯಕತ್ವವನ್ನು ಮನಬಂದಂತೆ ಥಳಿಸಲಾಗಿದೆ. ಗ್ರಾಮದ ದಲಿತ ಸಮುದಾಯ ಅಘೋಷಿತ ಶಾಶ್ವತ ಬಹಿ?ರವನ್ನು ಅನುಭವಿಸುತ್ತಿದೆ.

ಕಲಾಲಬಂಡಿ ಗ್ರಾಮದ ದಲಿತರಿಗೆ ಮೈಕಿನ ಮೂಲಕ ರಾಜಾರೋಷವಾಗಿ ಬಹಿಷ್ಕಾರವನ್ನು ಸಾರಲಾಗಿದೆ. ಅವರ ಕೇರಿಯ ರಸ್ತೆಗೆ ಅಡ್ಡವಾಗಿ ಮುಳ್ಳುತಂತಿಯನ್ನು ಜಡಿಯುವ? ದರ್ಪವನ್ನು ಮೇಲ್ಜಾತಿ ಸಮುದಾಯ ತೋರಿಸಿದೆ. ಬಹಿ?ರದ ಪರಿಣಾಮವಾಗಿ ದುಡಿದುಣ್ಣುವ ದಲಿತರೆಲ್ಲ ಕೆಲಸವಿಲ್ಲದೇ ಕೂತಿದ್ದಾರೆ, ವಿಧ್ಯಾವಂತ ಯುವಕರು ಹೊಟ್ಟೆಪಾಡಿಗಾಗಿ ಮಹಾನಗರಗಳಿಗೆ ವಲಸೆ ಹೋಗುವಂತಾಗಿದೆ.

ಹಿರೇಖೇಡದಲ್ಲಿಯೂ ದಲಿತ ಕುಟುಂಬಗಳನ್ನು ಬಹಿಷ್ಕರಿಸಲಾಗಿದೆ. ಕೃಷಿ ಕೂಲಿಕಾರ ದಲಿತರು ತಮ್ಮ ಸಂಘದ ಬೋರ್ಡ್ ಹಾಕಲೂ ಅಡ್ಡಿಪಡಿಸಲಾಗಿದೆ. ಅಲ್ಲಿನ ಕುಟುಂಬಗಳು ಈಗಲೂ ಆತಂಕದಲ್ಲಿವೆ.

ಹುಲಿಹೈದರ್, ಜನಸಾಮಾನ್ಯರೆ ಹೆಚ್ಚಿರುವ ಗ್ರಾಮ. ಸಣ್ಣಹನುಮಂತಪ್ಪ ಗ್ರಾಮದ ದಲಿತ ಯುವಕ. ನ್ಯಾಯ ಕೇಳಿದ ಮಹಾಪರಾಧಕ್ಕಾಗಿ ರೌಡಿ ರಾಜಕಾರಣಿಯ ಪಡೆ ಈತನನ್ನು ಕೊಲ್ಲಲೆಂಬಂತೆ ಬಂತು. ಆದರೆ ಸ್ಥಳದಲ್ಲೇ ಇದ್ದ ಮುಗ್ದ ಹುಸೇನಪ್ಪನನ್ನು ನಿರ್ದಯವಾಗಿ ಬಡಿಗೆಯಿಂದ ಹೊಡೆದು ದುಡಿದುಣ್ಣುವ ಬಡವನ ಕೈ ಮುರಿದು ತಳ್ಳಿ ಪರಾರಿಯಾಯಿತು.
ಕನಕಾಪುರದ ಯಲ್ಲಾಲಿಂಗ. ಇನ್ನೂ ಹದಿನೇಳು ವರ್ಷದ ಎಳೆ ಯುವಕ. ಗ್ರಾಮದ ಕಾಮಗಾರಿಗಳಲ್ಲಿ ನಡೆದ ಭ್ರಷ್ಟತೆ ಬಗ್ಗೆ, ಒಂದೇ ಒಂದು ಮಾತು ಟೀವಿ ಕ್ಯಾಮೆರಾ ಮುಂದೆ ಹೇಳಿದ. ಅದಕ್ಕೇ ಆತ ಹೆಣವಾಗಿ ಹೋದ. ಆತನನ್ನು ಅಟ್ಟಾಡಿಸಿಕೊಂದು ಹೆಣವನ್ನು ರೈಲು ಹಳಿಗಳ ಮೇಲೆ ಬಿಸಾಡಲಾಯ್ತು, ಎಂಬುದನ್ನು ಸಾಬೀತುಪಡಿಸಲು ಮಹಾ ತನಿಖೆಯ ಅಗತ್ಯವೇ ಇಲ್ಲದಂತೆ ನಿಚ್ಚಳ ಆಧಾರಗಳಿವೆ. ಆದರೂ ಕೊಲೆಗಡುಕರ ನಾಯಕನ ಕೊರಳ ಪಟ್ಟಿಗೆ ಕೈಹಾಕಲು ಪೊಲೀಸ್ ವ್ಯವಸ್ಥೆಗಿನ್ನೂ ಶಕ್ತಿ ಸಾಲುತ್ತಿಲ್ಲ. ಕೊಲೆಗಡುಕ ಪಡೆಯ ದರ್ಪವಿನ್ನೂ ತಗ್ಗಿಲ್ಲ. ಇವೆಲ್ಲ ಯಾವುದೋ ಕಾಲದ, ಯಾವುದೋ ರಾಜ್ಯ-ದೇಶಗಳ ಕಥೆಯಲ್ಲ. ನಾವು ಬದುಕುತ್ತಿರುವ ಕೊಪ್ಪಳ ಜಿಲ್ಲೆಯ ವರ್ತಮಾನದ ವಾಸ್ತವ. ನಾವಿದನ್ನು ಪ್ರಶ್ನಿಸುವುದು ಬೇಡವೆ ?

ನಾವು, ಎಂದರೆ; ಜಿಲ್ಲೆ-ನಾಡಿನ ಪ್ರಜ್ಞಾವಂತರು, ಮನುಷ್ಯತ್ವ ಇರುವವರು, ನ್ಯಾಯದ ಪಕ್ಷಪಾತಿಗಳು. ಬಳಿಕ, ಸಂವಿಧಾನದ ಮಲ್ಯಗಳನ್ನು ಎತ್ತಿಹಿಡಿಯುವವರು, ಪ್ರಜಾಪ್ರಭುತ್ವದ ಸಮಾಜ ನಿರ್ಮಾಣವಾಗಬೇಕೆಂದು ಬಯಸುವವರು. ನಾವು ರೌಡಿತನವನ್ನು ಜೈಲಿಗೆ ಹಾಕಿ ಎಂದು ಬೀದಿಯಲ್ಲಿ ಹೋರಾಟ ಮಾಡುತ್ತಿದ್ದರೆ ಅತ್ತ ಪ್ರಜಾಪ್ರತಿನಿಧಿಗಳು ತಮ್ಮ ಒಳಮನೆಯಲ್ಲಿ ಅಪರಾಧಿಗಳಿಗೆ ಆಶ್ರಯ ನೀಡಿದರೆ ನಾವು ಸುಮ್ಮನೆ ಕೂಡಬೇಕೆ? ಹಾಗಾದರೆ ರೌಡಿಪಡೆಯ ನಾಯಕನನ್ನು ಬಂಧಿಸಲು ತನಕವೂ ಸಾಧ್ಯವಾಗಿಲ್ಲವೆಂದರೆ ನಾವು ಪ್ರಜ್ಞಾವಂತರೆಂದು ಹೇಳಿಕೊಳ್ಳಲೂ ನಾಚಿಕೆಯಾಗುವಂತಹ ಸಂದರ್ಭ ಬರಬಾರದು. ನಾಗರಿಕರೆಂದರೆ ಬರೀ ಚುನಾವಣೆ ಕಾಲದ

ಓಟುಗಳು ಎಂದು ರಾಜಕಾರಣಿಗಳು ನಮ್ಮನ್ನು ಅಣಕಿಸುವಂತಾಗಬಾರದು. ಜನಶಕ್ತಿ ಬೀದಿಗಿಳಿದರೆ ಅಧಿಕಾರದ ಕುರ್ಚಿಗಳು ಮುರಿದು ಬೀಳುತ್ತವೆ, ಕೊಬ್ಬಿದ ಗೂಳಿ, ತೋಳಗಳೂ ಜೈಲಿನ ಮೇವು ತಿನ್ನಬೇಕಾಗುತ್ತದೆ ಎಂಬುದನ್ನು ಸಾಬೀತು ಪಡಿಸಬೇಕು. ಮನಸ್ಸಾಕ್ಷಿ ಇರುವ ಮನುಷ್ಯರೆಲ್ಲರೂ ಇಂತಹ ಹೋರಾಟಕ್ಕೆ ಮುಂದಾಗಬೇಕು.

ಅಹಿಂದ ಎನ್ನುವುದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳನ್ನು ಸಂಯೋಜಿಸುವ ಚಳವಳಿ ರಾಜಕಾರಣದ ಸೂಚಕ ಎಂದೇ ನಾಡಿನ ಚಿಂತಕರ ಗ್ರಹಿಕೆಯಾಗಿತ್ತು. ಆದರೆ ನಮ್ಮ ನಡುವಿನ ವಾಸ್ತವಗಳು ಅಹಿಂದ ಎನ್ನುವುದು ಅಧಿಕಾರ ರಾಜಕಾರಣದ ಮಾರ್ಗಮಾತ್ರ ಎಂದು ಮನಗಾಣಿಸಿವೆ. ಅಹಿಂದ ಸಮುದಾಯಗಳ ಬೆಂಬಲದಿಂದಾಗಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಹಿಂದ ಜಾತಿ ಹಿನ್ನೆಲೆಯ ಉಳ್ಳವರು ಇನ್ನಷ್ಟು ಶ್ರೀಮಂತರಾಗುತ್ತಿರುವುದು ಬಡ ಪರಿವಾರಗಳು ಅಹಿಂದದ ಬಲಿಷ್ಠರಿಂದ ದಮನಕ್ಕೀಡಾಗಿರುವುದು ಮೇಲಿನ ಘಟನೆಗಳು ಸಾಬೀತುಪಡಿಸಿವೆ. ಮುಖ್ಯಮಂತ್ರಿಗಳು ಘಟನೆಗಳಿಗೆ ಉತ್ತರದಾಯಿ ಆಗಬೇಕಿದೆ.

ರಾಜ್ಯದ ಬಿಜೆಪಿ ನಾಯಕರು ನೊಂದವರ ಸಂಕಷ್ಟವನ್ನು ತಮ್ಮ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಎದ್ದು ಕಾಣಿಸಿದೆ. ಕಲಾಲಬಂಡಿಯಲ್ಲಿ ಬಹಿಷ್ಕರಿಸಲ್ಪಟ್ಟ ದಲಿತರಿಗೆ ಸ್ಪಂದಿಸದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಬಹುಸಂಖ್ಯಾತ(ಮತ)ರಾದ ಗ್ರಾಮದ ಮೇಲ್ಜಾತಿಗಳ ಪರವಹಿಸಿದ್ದಾರೆ. ಜಿಲ್ಲೆ-ನಾಡಿನ ತುಂಬ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಮೌನವಹಿಸಿದ ಬಿಜೆಪಿ ಯಲ್ಲಾಲಿಂಗನ ಹತ್ಯೆ ಬಗ್ಗೆ ಅಷ್ಟು ನಾಟಕೀಯ ಕಾಳಜಿ  ತೋರುತ್ತಿರುವುದು ಪಕ್ಷದ ದಲಿತ ರಾಜಕಾರಣದ ತಂತ್ರಗಾರಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ಈಗಾಗಲೇ ಪ್ರಗತಿಪರ ಸಂಘಟನೆಗಳ ಹೋರಾಟದ ಪರಿಣಾಮವಾಗಿ ಹೊರಹೊಮ್ಮಿದ ಜನತೆಯ ಆಕ್ರೋಶವನ್ನು ದುರ್ಬಳಕೆ ಮಾಡಿಕೊಳ್ಳುವ ಅವಕಾಶವಾದ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆ. ಆಳುವ ಮತ್ತು ವಿರೋಧಿಸುವ ರಾಜಕಾರಣಿಗಳ ನಡತೆಗಳ ಹಿಂದಿನ ಹುನ್ನಾರವನ್ನು ಜನತೆ ಅರ್ಥೈಸಿಕೊಳ್ಳಬೇಕಿದೆ.
ಪತ್ರಿಕಾ ಮಾಧ್ಯಮ, ಕಳೆದೊಂದು ತಿಂಗಳಿಂದ ಪ್ರತಿನಿತ್ಯ ಎಂಬಂತೆ ಎಳೆಎಳೆಯಾಗಿ ದೌರ್ಜನ್ಯದ ವಿವರಗಳನ್ನು ಬಿಡಿಸಿಟ್ಟಿದೆ. ದೃಶ್ಯ ಮಾಧ್ಯಮಗಳು, ನೊಂದವರು ಕಣ್ಣೀರು ಸುರಿಸುವ ದೃಶ್ಯಗಳನ್ನು ಪ್ರಸಾರ ಮಾಡಿವೆ. ಸಂವಿಧಾನದ ನಾಲ್ಕನೆ ಅಂಗ ಎಂದೇ ಜನಮಾನ್ಯತೆಯನ್ನು ಪಡೆದ ಮಾಧ್ಯಮ ರಂಗ ಈಗಾಗಲೇ ಬಿತ್ತರಿಸಿದಂತೆ, ರೌಡಿಶೀಟರ್ ಹನುಮೇಶನಾಯಕ ಎಂಬ ವ್ಯಕ್ತಿ ಎಲ್ಲ ದುಷ್ಕೃತ್ಯಗಳ ಕೇಂದ್ರವಾಗಿದ್ದಾನೆ. ಭಾಗದ ಜನಾಭಿಪ್ರಾಯದಂತೆ ಅತಿ ಕಡಿಮೆ ಅವಧಿಯಲ್ಲಿ ನೂರಾರು ಕೋಟಿಗಳ ಒಡೆಯನಾಗಿ ಹಣಬಲ ಮತ್ತು ರೌಡಿಬಲಗಳ ಮೂಲಕ ರಾಜಕೀಯ ಕ್ಷೇತ್ರದಲ್ಲಿಯೂ ಹಿಡಿತ ಸಾಧಿಸಿದ್ದಾನೆ. ಜಿಲ್ಲೆಯ ರಾಜಕಾರಣದಲ್ಲಿ ಹಿಡಿತ ಸಾಧಿಸಿರುವ ಈತ ರಾಜ್ಯಮಟ್ಟದ ಆಳುವ ಪಕ್ಷದ ರಾಜಕಾರಣಿಗಳ ಆಪ್ತನಾಗಿದ್ದಾನೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಬೆಂಬಲವೂ ಈತನಿಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಮುಖ್ಯಮಂತ್ರಿಗಳವರೆಗೆ ನಂಟು ಹೊಂದಿರಬಲ್ಲ ಈತ ಬೇಕಾದ್ದನ್ನು ಮಾಡಿ ದಕ್ಕಿಸಿಕೊಳ್ಳುವ ದರ್ಪವನ್ನು ಸಾಬೀತುಪಡಿಸಿದಂತಾಗಿದೆ. ಇದು ಹೀಗೆಯೇ ಮುಂದುವರಿದರೆ ಕೊಪ್ಪಳ ಜಿಲ್ಲೆಯಲ್ಲಿ ಭೂಗತ ಪಾತಕ ಜಗತ್ತು ರೂಪುಗೊಂಡರೂ ಅಚ್ಚರಿಯಿಲ್ಲ. ಸುಪಾರಿ ಕೊಲೆಗಡುಕರು ಹುಟ್ಟಿಕೊಳ್ಳುವ ದಿನಗಳೂ ದೂರವಿಲ್ಲ. ಹೀಗಾಗದೇ, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಉಳಿಯಬೇಕಾದರೆ;
* ರೌಡಿಶೀಟರ್ ಹನುಮೇಶ ನಾಯಕನನ್ನು ಕೂಡಲೇ ಬಂಧಿಸಬೇಕು.
 * ಈತನ ಹಿತರಕ್ಷಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಯಲ್ಲಾಲಿಂಗನ ಹತ್ಯೆ ಮತ್ತು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ದಲಿತ ದೌರ್ಜನ್ಯಗಳ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಬೇಕು.
* ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬಹಿ?ರಕ್ಕೀಡಾಗಿ ನೊಂದಿರುವ ಸಾವಿರಾರು ದಲಿತರು ಹೊಟ್ಟೆ-ಬಟ್ಟೆಗಾಗಿ ವಲಸೆ ಹೋಗುತ್ತಿದ್ದು, ಆಯಾಗ್ರಾಮಗಳಲ್ಲೇ ಅವರಿಗೆ ಪೂರ್ಣಪ್ರಮಾಣದ ಉದ್ಯೋಗ ಕಲ್ಪಿಸಿಕೊಡಬೇಕು.
* ಈಗಲೂ ಜಾರಿಯಲ್ಲಿರುವ ಅಸ್ಪೃಶ್ಯತೆಯನ್ನು ತೊಡೆದುಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು ಸವರ್ಣೀಯರೊಂದಿಗೆ ಕೂಡಿ ಆಚರಿಸುವ ಸಾಂಸ್ಕೃತಿಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು.
* ಜಿಲ್ಲೆಯ ಶಾಂತಿ ಸುವ್ಯವಸ್ಥೆಗೆ ಆತಂಕಕಾರಿಯಾಗಿರುವ ಹನುಮೇಶನಾಯಕನ ಅಕ್ರಮ ಸಂಪಾದನೆಯ ತನಿಖೆಯಾಗಬೇಕು, ಎಂದು ಮೂಲಕ ಸರಕಾರಕ್ಕೆ ಆಗ್ರಹಿಸುತ್ತಿದ್ದೇವೆ.

ಬನ್ನಿ, ದುಷ್ಟಶಕ್ತಿಗೆ ಪ್ರತಿಯಾಗಿ ಜನಶಕ್ತಿಯನ್ನು ಸಾಬೀತು ಪಡಿಸೋಣ. ದಿನಾಂಕ ೨೪..೨೦೧೫ರ ಗೂಂಡಾಗಿರಿ ಅಳಿಯಲಿ- ಪ್ರಜಾಪ್ರಭುತ್ವ ಉಳಿಯಲಿ, ಅಸ್ಪೃಶ್ಯತೆ ತೊಲಗಲಿ-ಮಾನವೀಯತೆ ಬೆಳೆಯಲಿ ಎನ್ನುವ ಘೋಷದೊಂದಿಗೆಹುಲಿಹೈದರ್ ಚಲೋ ಹೋರಾಟವನ್ನು ಯಶಸ್ವಿಗೊಳಿಸೋಣ. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿ ಸರಕಾರಕ್ಕೆ ಎಚ್ಚರಿಕೆ ನೀಡೋಣ. ಹೋರಾಟದ ಸಾಗರಕ್ಕೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ, ಮಾನವ ಹಕ್ಕುಗಳ ಹೋರಾಟಗಾರರಾದ ಪ್ರೊ.ನಗರಗೆರೆ ಬಾಬಯ್ಯ, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ರಾಜ್ಯಾಧ್ಯಕ್ಷರಾದ ಆರ್.ಮಾನಸಯ್ಯ, ಪ್ರ ಗತಿಪರ ಚಿಂತಕರಾದ ಮುರುಘ ರಾಜೇಂದ  ಒಡೆಯರ್, ಕರ್ನಾಟಕ ಜನಶಕ್ತಿ ಅಧ್ಯಕ್ಷೀಯ ಮಂಡ ಳಿಯ ಸದಸ್ಯರಾದ ಪ್ರೊ.ನಗರಗೆರೆ ರಮೇಶ ಅವರು ಪಾಲ್ಗೊಳ್ಳಲಿದ್ದಾರೆ.

ಸಂಪರ್ಕ : ೯೭೪೦೭೫೭೫೫೦, ೯೪೪೮೬೩೩೭೧೦, ೮೧೦೫೯೦೦೫೨೭, ೭೩೫೩೭೭೦೨೦೧

ಸೋಮವಾರ, ಜೂನ್ 1, 2015

ಜಾನಪದ ಸಂಗತಿಗಳು ಮತ್ತು ಮಾಸ್ತಿ

ಸೌಜನ್ಯ:ಪ್ರಜಾವಾಣಿ

ನವೋದಯದ ಬಹುತೇಕ ಲೇಖಕರ ಗಮನವೆಲ್ಲ ಗ್ರಾಮೀಣ ವಿದ್ಯಮಾನಗಳ ಕಡೆಗೇ ಇದ್ದಿತು. ಆ ಕಾಲದ ಎಲ್ಲ ಲೇಖಕರೂ ಗ್ರಾಮ ಬದುಕಿನ ವಿವರಗಳ ಮುಖಾಂತರವೇ ವಿಶ್ವ ತತ್ವದ ಕಡೆಗೆ ಚಲಿಸಲು ಪ್ರಯತ್ನಿಸಿದರು. ‘ನಮ್ಮ ಊರಿನ ರಸಿಕರು’ ಕೃತಿ ಬರೆದ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅವರು ವಾಸಿಸಿದ ಗ್ರಾಮದಲ್ಲೇ ಗಾಂಧೀ ತತ್ವದ ಸಾಂಘಿಕ ಜೀವನ, ಅದರ ಸರಳ ಸಮೃದ್ಧಿಯ ಮತ್ತು ಮುಗ್ಧತೆಯನ್ನು ಕಾಣಬಯಸುತ್ತಾರೆ. ಅಂತೆಯೇ ಕುವೆಂಪು ಅವರ ಎರಡು ಶ್ರೇಷ್ಠ ಕಾದಂಬರಿಗಳ ಮೂಲ ಪರಿಸರ ಕುಪ್ಪಳಿ. ಕಾರಂತರದು ಕೋಟಾ ಆದರೆ, ಬೇಂದ್ರೆಯವರದು ಸಾಧನಕೇರಿ. ಇಂತಿರುವಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬರವಣಿಗೆಯ ಲೋಕ ವಿಸ್ತರಣಗೊಳ್ಳುವುದು ಕೋಲಾರ ಜಿಲ್ಲೆಯ ಮಾಸ್ತಿಯಿಂದಲೇ! ಮಾಸ್ತಿಯವರು ಜನಪದ ಮೂಲ ಪಾತ್ರಗಳಿಂದಲೇ ಎಲ್ಲ ಮಾನವೀಯ ಮೌಲ್ಯ ಮತ್ತು ಜೀವನ ತತ್ವಗಳನ್ನು ಕಂಡುಕೊಳ್ಳುತ್ತಾರೆ.
ಗಾಂಧೀಜಿ ನೇರ ಇಲ್ಲವೇ ಪರೋಕ್ಷ ಪ್ರಭಾವಕ್ಕೆ ಒಳಗಾದ ಕನ್ನಡದ ಲೇಖಕರನೇಕರು ಗ್ರಾಮೀಣ ಸಂಗತಿ ಕುರಿತಾದ ಆಸಕ್ತಿಯನ್ನು ಸರ್ವೋದಯದ ಒಂದು ಭಾಗವಾಗಿಯೇ ಸ್ವೀಕರಿಸಿದ್ದರು. ‘ಚೋಮನದುಡಿ’ ಕಾದಂಬರಿ ರಚನೆಯ ಹಿನ್ನೆಲೆಯಲ್ಲಿ ಶಿವರಾಮ ಕಾರಂತರು, ತಾವು ಮೂವತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತಿ ಅವರ ಬವಣೆಗಳನ್ನು ಕಂಡು ಕೃತಿ ರಚನೆಗೆ ತೊಡಗಿದ್ದಾಗಿ ಹೇಳಿದ್ದಾರೆ.
‘ಚೋಮನದುಡಿ’, ಕುವೆಂಪು ಅವರ ‘ನೇಗಿಲಯೋಗಿ’, ಬೇಂದ್ರೆಯವರ ‘ಭೂಮಿತಾಯಿಯ ಚೊಚ್ಚಿಲ ಮಗ’ ಇವೆಲ್ಲ ಪ್ರಕಟವಾದದ್ದು ಒಂದೇ ಕಾಲದಲ್ಲಿ. ಗ್ರಾಮ ಸಮಸ್ಯೆಗಳನ್ನು ಅರಿಯಲು ಹೋದ ಮಾಸ್ತಿ, ಕಾರಂತರು, ಎಚ್.ಎಲ್. ನಾಗೇಗೌಡರಂಥವರು ಗ್ರಾಮಸ್ಥರ ಸೃಜನಶೀಲ ಅಭಿವ್ಯಕ್ತಿಯ ಬಗೆಗೂ ಕುತೂಹಲ ತಾಳಿದರು.
1931ರಲ್ಲಿ ಹಲಸಂಗಿ ಗೆಳೆಯರು ಪ್ರಕಟಿಸಿದ ‘ಗರತಿಯ ಹಾಡು’ ಎಂಬ ಉತ್ತರ ಕರ್ನಾಟಕದ ಮೊದಲ ಜನಪದ ಸಂಕಲನಕ್ಕೆ ಬರೆದ ‘ಆಶೀರ್ವಾದ’ ಎಂಬ ಮುನ್ನುಡಿ ರೂಪದ ಬರವಣಿಗೆಯನ್ನು ಗಮನಿಸಿದರೆ ಇಂಗ್ಲಿಷ್ ವಿದ್ಯಾಭ್ಯಾಸದ ಮಾಸ್ತಿಯವರಿಗೆ ಲೋಕಜೀವನ ಮತ್ತು ಅಲ್ಲಿಯ ಸಾಹಿತ್ಯದ ಬಗ್ಗೆ ಇದ್ದ ಆಸಕ್ತಿ, ಕಳಕಳಿ ಎಷ್ಟೆಂಬುದು ಅರಿವಾಗುತ್ತದೆ. ಇದರಿಂದಲೇ ಈ ಹೊತ್ತು ಕನ್ನಡ ಸಾಹಿತ್ಯ ಪರಂಪರೆಗೆ ಸಮದಂಡಿಯಾಗಿಯೇ ಕನ್ನಡ ಜಾನಪದ ಸಾಹಿತ್ಯದ ಸಂಗ್ರಹ, ಅಧ್ಯಯನ, ಪ್ರಕಟಣೆ ಬೆಳೆದುಕೊಂಡು ಬಂದಿದೆ.
ಮಾಸ್ತಿಯವರು ‘ಗರತಿಯ ಹಾಡು’ ಕೃತಿಗೆ ಮುನ್ನುಡಿ ನೀಡಿದ್ದಲ್ಲದೆ ಆ ಸಂದರ್ಭಕ್ಕೆ ಜನತೆಗೆ ಮತ್ತು ಸಾಹಿತ್ಯಾಸಕ್ತರಿಗೆ ಜಾನಪದದ ಬಗ್ಗೆ ಇರಬೇಕಾದ ಆಸಕ್ತಿ, ಅಭಿರುಚಿಯನ್ನು ಕುರಿತು ತಮ್ಮ ವಿಮರ್ಶಾ ಕೃತಿಗಳಲ್ಲಿ 20ನೇ ಶತಮಾನದ ಪೂರ್ವಾರ್ಧದಲ್ಲೇ ಲೇಖನಗಳನ್ನು ಬರೆದಿರುತ್ತಾರೆ. 1955ರ ಸುಮಾರಿಗೆ ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಜನಪದ ತ್ರಿಪದಿಗಳ ಬಗ್ಗೆ ಮಾಸ್ತಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಹೇಳಿದ ಮಾತು ಹೀಗಿದೆ: ‘... ಈ ತ್ರಿಪದಿಗಳಲ್ಲಿ ನಮ್ಮ ಜನತೆಯ ಮನಸ್ಸು ಸಹಜ ಸುಂದರವಾಗಿ ಚಿತ್ರಿತವಾಗಿದೆ.
ಇವರು ಉಪಯೋಗಿಸುವ ಮಾತು ಸುಲಭವಾದದ್ದು, ದಿನ ಬಳಕೆಯದು; ಆದರೂ ಅದು ಹೃದಯದ ನೂರು ಭಾವಗಳನ್ನು ನಿರಾಯಾಸವಾಗಿ ವರ್ಣಿಸುತ್ತದೆ. ಓದುವವರ ಮನಸ್ಸನ್ನು ಅರ್ಥಕ್ಕೆ ನೇರವಾಗಿ ಒಯ್ಯುತ್ತದೆ. ಕಾವ್ಯದ ವಸ್ತು ಕೇವಲ ಐಶ್ವರ್ಯವಂತರ ಬಾಳು ಮಾತ್ರವಲ್ಲ, ಶೃಂಗಾರ ಲೀಲೆ ಮಾತ್ರವಲ್ಲ ಎನ್ನುವುದೂ ಸಾಮಾನ್ಯ ಜನಪದ ಬದುಕಿನ ಬೇನೆ ಬೇಗೆಗಳೂ, ನಲುಮೆ, ನಗೆಯಾಟಗಳೂ ಕಾವ್ಯದಲ್ಲಿ ಸುಂದರವಾಗಿ ರೂಪುಗೊಳ್ಳಬಹುದು. ಸುಸಂಸ್ಕೃತರಾದ ಜನರ ಮನಸ್ಸನ್ನು ಮುಟ್ಟಬಹುದು ಎನ್ನುವುದೂ ಈ ಪದಗಳಿಂದ ಕಾಣುತ್ತದೆ...’ ಮಾಸ್ತಿಯವರು ಈ ಬಗೆಯ ನುಡಿಗಳ ಕಡೆಗೆ ‘ಇದು ಕನ್ನಡ ಹೊಸ ಕವಿತೆಯ ಪೈರಿಗೆ ರಸ...’ ಎಂಬ ಮಾತಾಡಿದ್ದಾರೆ. ಇದರ ಅರ್ಥವ್ಯಾಪ್ತಿಯನ್ನು ಊಹಿಸುವುದೇ ಆದಲ್ಲಿ ಜಗತ್ತಿನ ಲೇಖಕರನೇಕರು ಮತ್ತು ಕನ್ನಡದ ದಲಿತ ಬಂಡಾಯ ಲೇಖಕರು ತಮ್ಮ ಕೃತಿನಿರ್ವಹಣೆಯ ವಸ್ತು ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಜನಪದ ಮೂಲ ಸಂಗತಿಗಳನ್ನೇ ಆಯ್ಕೆ ಮಾಡಿಕೊಂಡದ್ದು ಕಂಡುಬರುತ್ತದೆ. ಇದೀಗ ಕನ್ನಡ ಕಥಾ ಪ್ರಕಾರವಂತೂ ಆಯಾ ಪ್ರಾಂತೀಯ ಭಾಷೆ ಮತ್ತು ವಸ್ತು ಪ್ರಭೇದದಲ್ಲಿ ತನ್ನ ಅತ್ಯುತ್ತಮ ಕಲಾ ನೈಪುಣ್ಯತೆಯನ್ನು ಸಾಧಿಸಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.

ಮಾಸ್ತಿಯವರು ‘ಭಾವ’ ಎಂಬ ತಮ್ಮ ಜೀವನ ವಿವರಗಳುಳ್ಳ ಗ್ರಂಥದಲ್ಲಿ ತಮಗಿದ್ದ ಜಾನಪದ ಆಸಕ್ತಿಯನ್ನು ಕುರಿತು ಹೇಳಿಕೊಳ್ಳುವುದನ್ನು ಇಲ್ಲಿ ಕಾಣಿಸಬಹುದೆನಿಸುತ್ತದೆ. ಅವರು ರೆವಿನ್ಯೂ ಅಧಿಕಾರಿಯಾಗಿ ಕರ್ನಾಟಕದ ಬೇರೆ ಬೇರೆ ವಲಯಗಳಲ್ಲಿ ಉದ್ಯೋಗ ನಿರ್ವಹಿಸಿದ ಹಾಗೆಯೇ ಒಮ್ಮೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪ್ರವಾಸಿನಿಲಯದಲ್ಲಿ ತಂಗಿದ್ದರು. ರಾತ್ರಿ ಕಳೆದಂತೆ ಬೆಳದಿಂಗಳು ದಟ್ಟವಾಗಿ ಬಂಗಲೆಯ ಸುತ್ತ ಪಸರಿಸಿದ್ದಿತಂತೆ. ಆ ನಡುವೆ ಅವರಿದ್ದ ಬಂಗಲೆಯಿಂದ ಸ್ವಲ್ಪ ದೂರದಲ್ಲಿ ಕೋಲಾಟವೂ ಅದಕ್ಕೆ ತಕ್ಕಂಥ ಹಾಡುಗಳೂ ಕೇಳಿಸಿತು. ಅದನ್ನು ಕಿವಿಗೊಟ್ಟು ಆಲಿಸಿದ ಮಾಸ್ತಿ ಆ ಗುಂಪನ್ನು ಇತ್ತ ಬರಮಾಡಿ ಕೋಲು, ಕುಣಿತ, ಪದ ಕೇಳಿ ಅವರನ್ನು ಗೌರವಿಸಿ ಕಳಿಸಿದೆ ಎಂದು ಬರೆಯುತ್ತಾರೆ.
ಮಾಸ್ತಿಯವರಿಗೆ ಅಧಿಕಾರದಲ್ಲಿದ್ದಾಗ ಗ್ರಾಮಕಲೆ-ಸಾಹಿತ್ಯದ ಆಸಕ್ತಿ ಹುಟ್ಟಿದ್ದನ್ನು ಈ ಹಿಂದಿನ ಘಟನೆ ಹೇಳಿದರೆ, ಅವರು ‘ವಿಮರ್ಶೆ’ ಎಂಬ ಕೃತಿಯಲ್ಲಿಯೇ ಬರೆದ ‘ಕನ್ನಡನಾಡಿನ ಲಾವಣಿ ಸಾಂಗತ್ಯಗಳು’ ಎಂಬ ಲೇಖನ ವಿದ್ಯಾರ್ಥಿ ದಿಸೆಯಲ್ಲೇ ಅವರಿಗೆ ಜಾನಪದ ಕುರಿತಾದ ತೀವ್ರ ಕಳಕಳಿ ಹೇಗೆ ಚಿಗುರೊಡೆಯಿತೆಂಬುದನ್ನು ಹೇಳುತ್ತದೆ. ಇದು ಬಹುಶಃ ಜಾನಪದದಲ್ಲಿ ಯಾವುದೇ ಗ್ರಂಥ ಪ್ರಕಟವಾಗುವುದಕ್ಕೆ ಪೂರ್ವದಲ್ಲೇ ಬರೆದ ಲೇಖನ. 1926ರಲ್ಲಿ ಪ್ರಕಟವಾದ ಈ ಲೇಖನದ ಆರಂಭಕ್ಕೆ ಮಾಸ್ತಿಯವರು ಕೆಲವು ಸಂಗತಿಯನ್ನು ಹೀಗೆ ಉಲ್ಲೇಖಿಸುತ್ತಾರೆ. ‘...ಹದಿನಾಲ್ಕು ವರ್ಷಗಳ ಹಿಂದೆ ನಾನು ಕಾಲೇಜಿನಲ್ಲಿ ಓದುತ್ತಿದ್ದ ಕಾಲ. ಒಂದು ದಿನ ನಾನೂ ನನ್ನ ಸ್ನೇಹಿತರೂ ಊರ ಕೊಳದ ಬಳಿ ಸ್ನಾನಕ್ಕೆ ಹೋಗಿದ್ದೆವು. ಆಗ ದಾರಿಯಲ್ಲಿ ಗಂಡಸೊಬ್ಬ ಹೆಂಗಸೊಬ್ಬಳು ಇಬ್ಬರು ಜೋಗಿಗಳು ಬಂದರು. ಗಂಡಸು ಒಂದು ಚೀನಿ ಬುರುಡೆಯನ್ನು ಹಿಡಿದುಕೊಂಡಿದ್ದನು. ಇಂಗ್ಲಿಷರ ಬ್ಯಾಲೆಡ್‌ಗಳನ್ನು ಓದಿ ಅವರ ಸಾಹಿತ್ಯದಲ್ಲಿ ಅದಕ್ಕೆ ಇರುವ ಪ್ರಾಶಸ್ತ್ಯವನ್ನು ಆಂಗ್ಲೇಯ ಸಾಹಿತ್ಯ ಚರಿತ್ರೆಯಲ್ಲಿ ಆಗ ತಾನೇ ಓದಿ ತಿಳಿದಿದ್ದುದರಿಂದ ನನಗೆ ನಮ್ಮ ಸೀಮೆಯ ಗೀತೆಗಳನ್ನು ಸಂಗ್ರಹಿಸಬೇಕೆಂದು ಒಂದು ಆಸೆ ಆ ಕಾಲದಲ್ಲಿ ತಲೆದೋರಿತ್ತು. ನವೀನವಾದ ಆ ಉತ್ಸಾಹದಿಂದ ನಾನು ಜೋಗಿಯನ್ನು ಕರೆದು ‘ಹಾಡುತ್ತೀಯಾ..’ ಎಂದು ಕೇಳಿದೆನು. ಅವನು ಹಾಡುವವನಲ್ಲ, ಹಾಡುವವಳು ಆ ಹೆಂಗಸು ಎಂದು ಗೊತ್ತಾಯಿತು...’ ಎನ್ನುವ ಮಾಸ್ತಿ ಲೇಖನದ ನಡುವೆ ಆ ಪದ್ಯ ಭಾಗಗಳನ್ನು ಉದ್ಧರಿಸುತ್ತಾರೆ. ಹಾಡಿನ ಲಯ ಮತ್ತು ತಾಳದ ಸ್ವರೂಪವನ್ನೂ ಗುರುತಿಸುತ್ತಾರೆ. ಹಾಡಿನಲ್ಲಿ ಬರುವ ‘ಬ್ಯಾಟರಾಯಸ್ವಾಮಿ ದೇವುಡಾ’ ಎಂಬುದನ್ನು ಶಿವಸ್ವರೂಪಿ ದೈವವೆನ್ನುತ್ತಾರೆ. ಜನಪದರ ಶಿವ ಕೈಲಾಸವಾಸಿ ಎಂಬುದಕ್ಕಿಂತ ಮುಖ್ಯ ಒಬ್ಬ ಬೇಟೆಗಾರನೇ! ಅವನು ಬೇಟೆಮಾರ್ಗದಲ್ಲಿರುವಾಗ ಭಿಕ್ಷಕ್ಕೆ ಹೋಗಿ ಗಿರಿಜೆಯನ್ನು ಕಂಡು ಮೋಹಿಸುತ್ತಾನೆ.
1920ರ ಸುಮಾರಿನಲ್ಲಿಯೇ ಮಾಸ್ತಿಯವರು ತಾವು ಹೋದೆಡೆಯಲ್ಲೆಲ್ಲ ಜನಪದ ಕಲಾವಿದರನ್ನು ಕರೆಸಿ ಹಾಡು ಕೇಳುತ್ತ ಅವುಗಳ ವೈವಿಧ್ಯತೆಯನ್ನೆಲ್ಲ ವಿಶ್ಲೇಷಿಸುತ್ತಾರೆ. ಮಹಾಭಾರತ, ರಾಮಾಯಣವಲ್ಲದೆ ಇನ್ನಿತರ ಪೌರಾಣಿಕ ಕಥನಗಳೂ ಜನಪದ ಜಗತ್ತಿನಲ್ಲಿ ಹೇಗೆ ತಮ್ಮ ಅಸ್ತಿತ್ವ ಕಂಡುಕೊಂಡಿವೆ ಎಂಬುದರ ಚರ್ಚೆ ಲೇಖನದಲ್ಲಿ ದೀರ್ಘವಾಗಿಯೇ ಇದೆ. ‘ಅರ್ಜುನ ಜೋಗಿ’  ಎಂಬ ಜನಪದ ಗೀತೆಯ ನೆನಪಿನಲ್ಲೇ ಮಾಸ್ತಿಯವರು ‘ಜ್ಯೋಗ್ಯೋರ ಅಂಜನಪ್ಪನ ಕೋಳಿ ಕಥೆ’ ಬರೆದಿರುತ್ತಾರೆ.
ಬಂಡಿಹೊಳೆಯ ಅರ್ಚಕ ರಂಗಸ್ವಾಮಿಯವರು ದಕ್ಷಿಣ ಕರ್ನಾಟಕದ ಮೊದಲ ಜಾನಪದ ಕೃತಿಯಾಗಿ ‘ಹುಟ್ಟಿದಹಳ್ಳಿ ಹಳ್ಳಿಯ ಹಾಡು’ ಕೃತಿಯನ್ನು 1933ರ ಸುಮಾರಿನಲ್ಲಿ ಪ್ರಕಟಿಸಿದರು. ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನ ದಕ್ಷಿಣ ಭಾಗಕ್ಕೆ ಹೇಮಾವತಿ ನದಿಯ ತೀರದ ಸುಂದರ ಪರಿಸರದಲ್ಲಿರುವ ಬಂಡಿಹೊಳೆಯಲ್ಲಿ ಈಚೆಗೆ ಅರ್ಚಕ ರಂಗಸ್ವಾಮಿಯವರ ಹಿರಿಯ ಪುತ್ರರನ್ನು ಕಂಡು ಅಂಥದೊಂದು ಪುಸ್ತಕ ಬರೆಯಲು ಪ್ರೇರಣೆ ದೊರೆತದ್ದು ಎಲ್ಲಿಂದ ಎಂಬ ಪ್ರಶ್ನೆಗೆ ಅವರ ಉತ್ತರ ಕುತೂಹಲಕರವಾಗಿದ್ದಿತು- ಮಾಸ್ತಿಯವರು ನಂಜನಗೂಡು ಸುತ್ತಿನಲ್ಲಿ ಉಪವಿಭಾಗಾಧಿಕಾರಿಯಾಗಿದ್ದರಂತೆ. ಒಮ್ಮೆ ಮೈಸೂರಿನಲ್ಲಿ ಸಿಕ್ಕಿದ ಮಾಸ್ತಿ ಸಾಹೇಬರನ್ನು ರಂಗಸ್ವಾಮಿಯವರು ಭೇಟಿಮಾಡಿದರು. ಊರು, ಕೇರಿ, ಪ್ರದೇಶಗಳನ್ನೆಲ್ಲ ವಿಚಾರಿಸಿದ ಮಾಸ್ತಿಯವರು ರಂಗಸ್ವಾಮಿಯವರಿಗೆ ಗ್ರಾಮದಲ್ಲಿರುವ ನುಡಿಗಟ್ಟು, ಗಾದೆ, ಒಗಟು, ಬೈಗುಳ, ಹಾಡು ಇದನ್ನೆಲ್ಲ ಸಂಗ್ರಹಿಸಿ ಪ್ರಕಟಿಸಲು ಸೂಚಿಸಿದರಂತೆ. ಈ ಸಲಹೆಯನ್ನು ರಂಗಸ್ವಾಮಿಯವರಿಂದ ತಿರಸ್ಕರಿಸಲಾಗಲಿಲ್ಲ. ನಾಲ್ಕನೇ ತರಗತಿಯಷ್ಟು ಓದಿದ್ದ ರಂಗಸ್ವಾಮಿಯವರು ತಮ್ಮ ಪರಿಸರದ ಸಕಲ ಶಾಬ್ದಿಕ ಸಂಗತಿಗಳನ್ನು ಸಂಗ್ರಹಿಸಿ ಹಣ ಹಾಕಿ ಪ್ರಕಟಿಸಿದರು. ಹೀಗೆ ‘ತಮ್ಮ ತಂದೆಯವರು ಹುಟ್ಟಿದಹಳ್ಳಿ ಕೃತಿ ಪ್ರಕಟಿಸಲು ಬೀಜ ಪ್ರೇರಣೆಯಾದುದು ಮಾಸ್ತಿಯವರ ನುಡಿಮಾತಿನಿಂದ’ ಎಂದರು.
ಜಾನಪದದ ವೈವಿಧ್ಯತೆ, ಸಂಗ್ರಹ, ಚಿಂತನೆ, ಕಲಾವಿದರನ್ನು ಕುರಿತಾಗಿ ತಮ್ಮ ಜೀವನದುದ್ದಕ್ಕೂ ಆಸಕ್ತಿ ತೋರಿಸಿದ ಮಾಸ್ತಿಯವರು ಕಥೆಗಳನ್ನು ಸಹ ಆ ಹಿನ್ನೆಲೆಯಲ್ಲೇ ಬರೆದರು. ಮಾಸ್ತಿಯವರು ಐತಿಹಾಸಿಕ, ಪೌರಾಣಿಕ, ಸಾಮಾಜಿಕವಲ್ಲದೆ ವ್ಯಕ್ತಿಸಂಬಂಧಿತವೆನಿಸುವ ಸುಮಾರು ನೂರು ಕಥೆಗಳನ್ನು ಬರೆದಿರುತ್ತಾರೆ. ಮಾಸ್ತಿಯವರ ಆರಂಭಿಕ ಬರಹಗಳಾದ ರಂಗಪ್ಪನ ದೀಪಾವಳಿ, ರಂಗನ ಮದುವೆ, ಕಾಮನಹಬ್ಬದ ಒಂದು ಕಥೆ, ವೆಂಕಟಶಾಮಿ ಪ್ರಣಯ, ಇವೆಲ್ಲ ಜನಪದ ಜಗತ್ತಿನಿಂದ ಆಯ್ದ ಅನುಭವಗಳೇ! ಈ ಬಗೆಯ ಜನಪದ ಮೂಲದ ಬರಹಗಳಿಗೆ ತೊಡಗುವಲ್ಲಿ ಮಾಸ್ತಿ ಕೊಂಚ ಸಂಕೋಚ ಭಾವದಿಂದಲೇ ‘... ಇದೇನು ರಂಗನ ಮದುವೆ, ರಂಗಪ್ಪನ ದೀಪಾವಳಿ ಎಂದು ಯಾರೂ ಮೂಗು ಮುರಿಯಬಾರದು, ಮನಸ್ಸು ಕೊಟ್ಟೇ ನಾನು ಹೇಳುವ ಕಥೆಗಳನ್ನು ಸ್ವಲ್ಪ ಹೊತ್ತು ಕೇಳಿಸಿಕೊಳ್ಳಬೇಕು...’ ಎಂದೇ ಕಥೆಗಳನ್ನು ಆರಂಭಿಸುತ್ತಾರೆ. ಅಷ್ಟೇ ಅಲ್ಲ ಮಾಸ್ತಿಯವರ ಕಥನ ಶೈಲಿಯೂ ಕೂಡ ಜನಪದ ಮಾದರಿಯದೇ. ಯಾರು ಯಾರಿಗೋ ಹೇಳಿದ ಕಥೆಯನ್ನು ತಾವೂ ಕೇಳಿಸಿಕೊಂಡಂತೆ ಬರೆಯುತ್ತಾರೆ. ಅಥವಾ ಎಲ್ಲಿಯೋ ಕೇಳಿದ, ನಡೆದ ಐತಿಹಾಸಿಕ ಘಟನೆಯನ್ನು ನೆನಪಿಸಿಕೊಳ್ಳುವವರಂತೆ, ಇಲ್ಲವೇ ಕಥೆಯೊಳಗೆ ಒಂದು ಪಾತ್ರ ತನ್ನ ಬದುಕಿನ ಘಟನೆಯನ್ನು ಇತರ ಪಾತ್ರಗಳ ಮುಂದೆ ಹಂಚಿಕೊಳ್ಳುತ್ತದೆ. ‘ಗೌತಮಿ ಹೇಳಿದ ಕಥೆ’ಯು ಇದಕ್ಕೆ ಅತ್ಯುತ್ತಮ ಉದಾಹರಣೆ! ಜನಪದರಂತೆಯೇ ಮಾಸ್ತಿಯವರು ಬದುಕಿನ ತಾಳುವಿಕೆಯನ್ನು, ವಿಧಿ ವಾದವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ತಮ್ಮ ಕಥೆಗಳ ಪಾತ್ರಗಳು ಅವರದೇ ಬದುಕಿನಲ್ಲಿಯ ದಾಟುವಿಕೆಯನ್ನು ಹೇಳುವುದಿಲ್ಲ. ಹೆಚ್ಚಾಗಿ ಪಾತ್ರಗಳು ಇರುವ ಬದುಕನ್ನು ಇರುವಂತೆಯೇ ಒಪ್ಪಿಕೊಳ್ಳುತ್ತವೆ. ಇದೇನೇ ಇರಲಿ ಮಾಸ್ತಿಯವರ ಕಥೆ, ಕಾವ್ಯ, ಕಾದಂಬರಿ, ನಾಟಕ, ಭಾಷಾಂತರ ಚರ್ಚೆಗಿಂತ ಅವರಿಗೆ ವಿದ್ಯಾಭ್ಯಾಸ ಕಾಲದಿಂದ ಕೊನೆಯವರೆಗೂ ಇದ್ದ ಜಾನಪದ ಸಂಬಂಧದ ಕುತೂಹಲ, ಆಸಕ್ತಿಯನ್ನಷ್ಟೇ ಇಲ್ಲಿ ಪ್ರಸ್ತಾಪಿಸಲಾಗಿದೆಯಷ್ಟೆ.
ಮಾಸ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ಕೊಡ ಮಾಡಿದ್ದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ. ಆ ಹೊತ್ತು ಮಾಸ್ತಿಯವರು ಬರುವುದನ್ನು ಮುಖ್ಯಮಂತ್ರಿ ಯಾಗಿದ್ದ ರಾಮಕೃಷ್ಣ ಹೆಗಡೆಯವರು ಹೊರಗೆ ನಿಂತು ನಿರೀಕ್ಷಿಸುತ್ತಿದ್ದರು. ಬಂದ ಮಾಸ್ತಿಯವರು ‘ನನಗಾಗಿ ನೀವು ಇಲ್ಲಿ ನಿಲ್ಲುವುದೇ’ ಎಂದರು. ಪ್ರಶಸ್ತಿ ವಿತರಣೆಗೆ ರಾಷ್ಟ್ರಪತಿಗಳೇ ಬರುತ್ತಿರುವಾಗ ನಾನು ನಿಮಗಾಗಿ ಕಾಯವುದು ‘ಕನ್ನಡಿಗನಾದ’ ನನಗೆ ಸಂತೋಷದ ಸಂಗತಿ ಎಂದರು.
1969ರ ಸಮಾರಂಭವೊಂದರಲ್ಲಿ ಮಾಸ್ತಿಯವರೇ ಹೇಳಿದ ಮಾತು: ಒಂದು ದಿನ ಮಾಸ್ತಿಯವರು ಕಚೇರಿಯಿಂದ ಮನೆಗೆ ಹೋಗುವುದು ತಡರಾತ್ರಿಯಾಗಬಹುದೆಂದು ಮನಗಂಡು, ಸಂಜೆ ಹೊತ್ತಿಗೆ ತಾಯಿ ಕಾಯುತ್ತಿರಬಹುದೆಂದು ಡ್ರೈವರ್ ಕೂಡೆ ತಾವು ಮನೆಗೆ ಬರುವುದು ವಿಳಂಬವಾಗುವುದೆಂದು ಹೇಳಿ ಬರಲು ಕಳಿಸಿದರಂತೆ. ಡ್ರೈವರ್ ಮನೆಯತ್ತ ಬಂದು ಹೊರಗೆ ನಿಂತಿದ್ದ ತಾಯಿಯವರಿಗೆ ‘ಸಾಹೇಬರು’ ಬರುವುದು ತಡವಾಗುತ್ತದೆಂದ. ತಾಯಿ, ‘ನಾನು ಸಾಹೇಬರಿಗಾಗಿ ಕಾಯುತ್ತಿಲ್ಲ, ‘ವೆಂಕ್ಟೇಶೂ’ ಬರಲಿಲ್ಲವೇ’ ಎಂದು ಕೇಳಿದರು. ತಾಯಿಯವರಿಗೂ, ಡ್ರೈವರ್‌ಗೂ ಸಾಹೇಬರು ಯಾರು, ವೆಂಕ್ಟೇಶೂ ಯಾರು ಎಂದು ಬೇಗ ಅರ್ಥವೇ ಆಗಲಿಲ್ಲವಂತೆ !
ಇದೇ ಜೂನ್ 6, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ.