ಬುಧವಾರ, ಸೆಪ್ಟೆಂಬರ್ 6, 2017

ನೋಟುನಿಷೇಧ: ಅತ್ಯಂತ ಅಸಮರ್ಥನೀಯ ಕ್ರಮ


ಅನುಶಿವಸುಂದರ್ 
Image result for note ban
ನೋಟುನಿಷೇಧವು ಅತ್ಯಂತ ಅಸಮಂಜಸ ಕ್ರಮ. ಹೀಗಾಗಿ ಅದನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಅಥವಾ ರಿಸರ್ವ್ ಬ್ಯಾಂಕಿನ ಬಳಿ ಏನೂ ಇಲ್ಲ.


ನೋಟು ನಿಷೇಧ (ಡಿಮಾನಿಟೈಸೇಷನ್- ನೋಟು ಅಮಾನ್ಯೀಕರಣ) ಉದ್ದೇಶವು ಕಪ್ಪುಹಣವನ್ನು ಮತ್ತು ಖೋಟಾನೋಟುಗಳನ್ನು ನಾಶಗೊಳಿಸಿ, ಭಯೋತ್ಪಾದಕರಿಗಿದ್ದ ಹಣದ ಮೂಲವನ್ನು ಬತ್ತಿಸಿ, ದೇಶವು ಈವರೆಗೆ ಅನುಭವಿಸಿಕೊಂಡು ಬಂದಿದ್ದ ಭ್ರಷ್ಟಾಚಾರ ಮತ್ತಿತರ ಎಲ್ಲಾ ಪಿಡುಗುಗಳಿಂದಲೂ ಮುಕ್ತಗೊಳಿಸುವುದಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ನರೇಂದ್ರಮೋದಿಯವರ ಸರ್ಕಾರ ನೋಟು ನಿಷೇಧದ ಉದ್ದೇಶ ದೇಶವನ್ನು ನಗದು ಅವಲಂಬಿತ ಆರ್ಥಿಕತೆಯಿಂದ ಡಿಜಿಟಲ್ ಆರ್ಥಿಕತೆ ಮತ್ತು ಕಡಿಮೆ ನಗದಿರುವ ಆರ್ಥಿಕತೆಯತ್ತ ಕೊಂಡೊಯ್ಯುವುದಾಗಿದೆಯೆಂದು ಹೇಳಿತು. ಅಧಿಕ ನಗದು ಮತ್ತು ಅಧಿಕ ಮೌಲ್ಯದ ನೋಟುಗಳು ಭ್ರಷ್ಟಾಚಾರವನ್ನು ಹೆಚ್ಚುಮಾಡುತ್ತದೆಂದು ಹೇಳಲಾಯಿತು. ನಂತರ ನೋಟುನಿಷೇಧದಿಂದ ಇನ್ನೂ ಹೆಚ್ಚಿನದನ್ನು ಸಾಧಿಸಬಹುದೆಂದು ಸರ್ಕಾರವು ಹೇಳುತ್ತಾಹೋಯಿತು. ಉದಾಹರಣೆಗೆ ಇದರಿಂದಾಗಿ ಅಸಂಘಟಿತ ಆರ್ಥಿಕ ವಲಯವನ್ನು ಮುಖ್ಯಧಾರೆಗೆ ತರಬಹುದೆಂದೂ ಮತ್ತು ತೆರಿಗೆ ಕಟ್ಟುವವರ ಸಂಖ್ಯೆಯೂ ಹೆಚ್ಚುತ್ತದೆಂದೂ ಹೇಳಲಾಯಿತು. ಅಷ್ಟು ಮಾತ್ರವಲ್ಲದೆ, ನಿಷೇಧಗೊಂಡ ರೂ. ೫೦೦ ಮತ್ತು ರೂ. ೧೦೦೦ ಮುಖಬೆಲೆಯ ಅಂದಾಜು - ಲಕ್ಷ ಕೋಟಿ ರೂ ಮೌಲ್ಯದ ನೋಟುಗಳು ರಿಸರ್ವ್ ಬ್ಯಾಂಕಿಗೆ ಶಾಶ್ವತವಾಗಿ ಮರಳುವುದಿಲ್ಲವೆಂದೂ ನಮಗೆ ಹೇಳಲಾಯಿತು. ಇನ್ನೂ ಕೆಲವರಂತೂ ಹಣವನ್ನು ರಿಸರ್ವ್ ಬ್ಯಾಂಕು ಸರ್ಕಾರಕ್ಕೆ ವಿಶೇಷ ಲಾಭದ ಪಾಲಾಗಿ (ಡಿವಿಡೆಂಡ್) ನೀಡಲಿದ್ದು ಅದನ್ನು ಸರ್ಕಾರ ಅಭಿವೃದ್ಧಿ ಯೋಜನೆಗೆ ಬಳಸಿಕೊಳ್ಳಲಿದೆಯೆಂದು ಊಹಿಸಿದರು. ಮತ್ತೆ ಕೆಲವರು ಇದೊಂದು ಚಾಣಾಕ್ಷ ನಡೆಯೆಂದು ಸಂಭ್ರಮಿಸಿದರು. ಆದರೆ ಅವರೆಲ್ಲರ ನಿರೀಕ್ಷೆಗಳು ತಪ್ಪಾಗಿದ್ದವು.

ನೋಟುನಿಷೇಧದಿಂದಾಗಿ ಸಂಭವಿಸುವ ಕೆಲವು ತಾತ್ಕಾಲಿಕ ಕಷ್ಟಗಳನ್ನು ಜನರು ಸಹಿಸಿಕೊಳ್ಳಬೇಕೆಂದೂ, ಬದಲಿಗೆ ದೀರ್ಘಕಾಲದಲ್ಲಿ ಅನುಕೂಲತೆಗಳಾಗಲಿವೆಯೆಂದೂ ಮೋದಿ ಸರ್ಕಾರವು  ೨೦೧೬ರ ನವಂಬರ್ ರಿಂದಲೂ ಹೇಳುತ್ತಲೇ ಬಂದಿತ್ತು. ತಥಾಕಥಿತ ದೂರಗಾಮಿ ಲಾಭಗಳು ಮಾತ್ರ ಕೈಗೂ ಎಟುಕದೆ, ಕಣ್ಣಿಗೂ ಎಟುಕದೆ ದೂರವೇ ಉಳಿದುಬಿಟ್ಟವು. ಜೀವಗಳು ಮತ್ತು ಜೀವನೋಪಾಯಗಳು ನಾಶವಾಗುತ್ತಲೇ ಹೋದವು. ಆದರೂ ನೋಟು ನಿಷೇಧದ ಬಗ್ಗೆ ಮನವರಿಕೆ ಮಾಡಬಹುದಾದ ಉತ್ತರಗಳನ್ನಾಗಲೀ, ಅಥವಾ ಅದರ ಸಕಾರಾತ್ಮಕ ಪರಿಣಾಮಗಳ ಪುರಾವೆಗಳನ್ನಾಗಲೀ ಸರ್ಕಾರವು  ಒದಗಿಸಲಾಗಿಲ್ಲ. ಇಷ್ಟೆಲ್ಲಾ ಆದರೂ ಕೇಂದ್ರದ ಹಣಕಾಸು ಮಂತ್ರಿ ಅರುಣ್ ಜೈಟ್ಲಿಯವರು ನೋಟು ನಿಷೇಧವು ಭಾರತದ ಆರ್ಥಿಕತೆಗೆ ಮತ್ತು ಜನತೆಗೆ ಅತ್ಯಂತ ಪ್ರಯೋಜನಕಾರಿಯಾಗಿರುವುದು ಮಾತ್ರವಲ್ಲದೆ  ನೋಟು ನಿಷೇಧ ಮತ್ತು ಸರಕು ಹಾಗು ಸೇವಾ ತೆರಿಗೆ ವ್ಯವಸ್ಥೆಗಳೆರಡೂ ಭಾರತದ ಆರ್ಥಿಕತೆಯ ರಚನಾತ್ಮಕ ಮತ್ತು ನೈತಿಕ ತಳಹದಿಯನ್ನೇ ಬದಲಾಯಿಸಿದೆ ಎಂದು ಅತ್ಯಂತ ಅಪ್ರಾಮಾಣಿಕತೆಯಿಂದ ಕೊಚ್ಚಿಕೊಳ್ಳುತ್ತಿದ್ದಾರೆ.
Image result for note ban

ವಾರ ಹೊರಬಿದ್ದ ರಿಸರ್ವ್ ಬ್ಯಾಂಕಿನ ೨೦೧೬-೧೭ರ ವಾರ್ಷಿಕ ವರದಿಯು ನೋಟು ನಿಷೇಧವನ್ನು ಭಾರತದ ಆರ್ಥಿಕತೆಯ ಬಗ್ಗೆ ಯಾವುದೇ ತಿಳವಳಿಕೆಯಿಲ್ಲದೆ ಮಾಡಲಾಗಿದೆಯೆಂಬ ಅನುಮಾನವನ್ನು ಸತ್ಯವೆಂದು ಸಾಬೀತುಗೊಳಿಸಿದೆ. ರಿಸರ್ವ್ ಬ್ಯಾಂಕಿನ ವರದಿ ಹೊರಬಿದ್ದ ಮರುದಿನವೇ ಕೇಂದ್ರೀಯ ಅಂಕಿಅಂಶ ಇಲಾಖೆಯು ಇತ್ತೀಚಿನ ತ್ರೈಮಾಸಿಕ ಅವಧಿಯ ಅಂತರಿಕ ಉತ್ಪನ್ನದ (ಜಿಡಿಪಿ) ಅಭಿವೃದ್ಧಿ ದರದ ಅಂದಾಜನ್ನು ಬಿಡುಗಡೆ ಮಾಡಿತು. ಅದರ ಪ್ರಕಾರ ವರ್ಷದ ಏಪ್ರಿಲ್-ಜೂನ್ ಅವಧಿಯ ತ್ರೈಮಾಸಿಕದಲ್ಲಿ ದೇಶದ ಒಟ್ಟಾರೆ ಅಂತರಿಕ ಉತ್ಪನ್ನದದ ಅಭಿವೃದ್ಧಿಯ ದರವು ಶೇ.. ಕ್ಕೆ ಕುಸಿದಿದೆ. ನೋಟು ನಿಷೇಧದ ತತ್ ಕ್ಷಣದ ತ್ರೈಮಾಸಿಕವಾದ ಜನವರಿ-ಮಾರ್ಚ್ ಅವಧಿಯಲ್ಲಿ ಅದು ಶೇ.. ರಷ್ಟೆಂದು ಅಂದಾಜು ಮಾಡಲಾಗಿತ್ತು. ಹೀಗಾಗಿ ತ್ರೈಮಾಸಿಕದಲ್ಲಿ ಅಭಿವೃದ್ಧಿ ದರ ಅದಕ್ಕಿಂದಲೂ ಕೆಳಗಿಳಿದಿರುವುದು ಸಾಬೀತಾಗಿದೆ. ಆದರೆ ಕಳೆದ ವರ್ಷದ ಏಪ್ರಿಲ್-ಜೂನ್  ತ್ರೈಮಾಸಿಕದಲ್ಲಿ ಅಭಿವೃದ್ಧಿ ದರವು ಶೇ..೯ರಷ್ಟಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ೨೦೧೬-೧೭ರ ಆರ್ಥಿಕ ಸಮೀಕ್ಷೆ ಸಂಪುಟ ಪ್ರಕಾರ ಅಭಿವೃದ್ಧಿ ದರದಲ್ಲಿನ ಕುಸಿತವು ನೋಟು ನಿಷೇಧದ ಪೂರ್ವದಿಂದಲೇ ಪಾರಂಭಗೊಂಡಿದ್ದು, ನೋಟು ನಿಷೇಧದ ನಂತರದ ಅವಧಿಯಲ್ಲಿ ತೀವ್ರಗೊಂಡಿತು.

ಅಂಕಿಅಂಶ ಕಚೇರಿಯ ಇತ್ತೀಚಿನ ವರದಿಯು ಇದನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ. ಇದು ನೋಟು ನಿಷೇಧದಿಂದ ಭಾರತದ ಆರ್ಥಿಕ ಅಭಿವೃದ್ದಿಗೆ ಯಾವುದೇ ಧಕ್ಕೆ ಆಗಿಲ್ಲ ಎಂಬ ಹಣಕಾಸು ಮಂತ್ರಿಯವರ ಆಗಸ್ಟ್ ೩೦ರ ಹೇಳಿಕೆಯ ಯಥಾರ್ಥತೆಯನ್ನು ಅಸಲಿಯತ್ತನ್ನು ಪ್ರಶ್ನಿಸುತ್ತದೆ. ನೋಟು ನಿಷೇಧದಿಂದ ಉಂಟಾಗಿರುವ ಆರ್ಥಿಕ ನಷ್ಟವೇನೆಂಬುದು ಈಗ ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ಭಾರತದ ಆರ್ಥಿಕತೆಯ ಅಸಂಘಟಿತ ವಲಯದ ಬಡಜನತೆಯ ಮೇಲೆ ಇನ್ನಷ್ಟು ಸಂಕಷ್ಟಗಳನ್ನು ಮತ್ತು ಅನಗತ್ಯ ವೆಚ್ಚಗಳನ್ನೂ ಹೇರಲಾಯಿತು. ಹಾಗೂ ತಿಂಗಳುಗಳ ಕಾಲ ಮಾಮೂಲಾಗಿ ನಡೆಯುತ್ತಿದ್ದ ಎಲ್ಲಾ  ಆರ್ಥಿಕ ವ್ಯವಹಾರಗಳು ಅಸ್ತವ್ಯಸ್ತಗೊಳಿಸಲಾಯಿತು. ರಿಸರ್ವ್ ಬ್ಯಾಂಕಿಗಿದ್ದ ಸ್ವಾಯತ್ತತೆಯನ್ನು ಕಡೆಗಣಿಸಲಾಯಿತು. ಹೀಗಾಗಿ ವರ್ಷ ಅದೂ ಸಹ ಸಾಕಷು ನಷ್ಟವನ್ನನುಭವಿಸುವಂತಾಗಿದೆ. ಕೊನೆಯದಾಗಿ ನೋಟು ನಿಷೇಧದ ನೇರ ಪರಿಣಾಮವಾಗಿ ರಿಸರ್ವ್ ಬ್ಯಾಂಕು ಸರ್ಕಾರಕ್ಕೆ ಕೊಡುತ್ತಿದ್ದ ಲಾಭದ ಪಾಲಿನಲ್ಲೂ ಸಾಕಷ್ಟು ಇಳಿಕೆಯಾಗಿದೆ.

ರಿಸರ್ವ್ ಬ್ಯಾಂಕಿನ ೨೦೧೬-೧೭ರ ವಾರ್ಷಿಕ ವರದಿಯ ಪ್ರಕಾರ ಚಲಾವಣೆಯಿಂದ ಹಿಂತೆಗೆದುಕೊಳ್ಳಲಾಗಿದ್ದ ೫೦೦ ಮತ್ತು ೧೦೦೦ ಮುಖಮೌಲ್ಯದ ನೋಟುಗಳಲ್ಲಿ ಶೇ.೯೮.೯೬ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿದೆ. ಅಂದರೆ ಕೇವಲ ೧೬,೦೦೦ ಕೋಟಿ ರೂ. ಮೌಲ್ಯದ ನೋಟುಗಳು ಮಾತ್ರ (ಶೇ..೦೪) ಹಿಂತಿರುಗಿಲ್ಲವೆಂದಾಯ್ತು. ಇದಕ್ಕೆ ಕೇವಲ ಎರಡು ಅರ್ಥಗಳಿರಲು ಸಾಧ್ಯ. ಒಂದು, ಕಾನೂನು ಬಾಹಿರ ಹಣವನ್ನು ಹೊಂದಿರುವವರ ಸಂಖ್ಯೆ ತೀರಾ ಕಡಿಮೆ. ಅಥವಾ, ಕಾನೂನುಬಾಹಿರ ಹಣ ಹೊಂದಿದ್ದವರು ತಮ್ಮೆಲ್ಲಾ ಕಪ್ಪು ಹಣವನ್ನು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ತಂದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಮಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಇನ್ನೊಂದು ಅಂಶವನ್ನೂ ಗಮನಿಸಬೇಕು. ೧೯೪೬ರಲ್ಲಿ ಅಧಿಕ ಮೌಲ್ಯದ ನೋಟುಗಳನ್ನು ನಿಷೇಧ ಮಾಡಿದಾಗ ಶೇ. ೧೪ರಷ್ಟು ನೋಟುಗಳು ಮತ್ತು ೧೯೭೮ರಲ್ಲಿ ಶೇ.೧೦ರಷ್ಟು ನೋಟುಗಳೂ ಬ್ಯಾಂಕುಗಳಿಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಸರ್ಕಾರದ ಹೇಳಿಕೆಗಳ ಹಿನ್ನೆಲೆಯಲ್ಲಿ ನೋಡಿದರೂ ಪ್ರಸ್ತುತ ಸರ್ಕಾರದ ಪ್ರಯತ್ನಗಳು ಸರಿಯಾದ ಫಲಿತಾಂಶಗಳನ್ನೇನೂ ನೀಡಿಲ್ಲ.

ಆರ್ಥಿಕತೆಯನ್ನು ಮರುನಗದೀಕರಿಸುವ ಸಲುವಾಗಿ ರಿಸರ್ವ್ ಬ್ಯಾಂಕಿಗೆ ರೂ.೭೯೬೫ ಕೋಟಿ ವೆಚ್ಚವಾಗಿದೆ. ಮಾಮೂಲಾಗಿ ರಿಸರ್ವ್ ಬ್ಯಾಂಕು ಸರ್ಕಾರಕ್ಕೆ ವರ್ಗಾಯಿಸುತ್ತಿದ್ದ ಲಾಭದ ಪಾಲು ಬಾರಿ ಕೇವಲ ರೂ. ೩೦,೬೫೯ ಕೋಟಿ ಮಾತ್ರವಾಗಿದೆ. ಇದು ಕಳೆದ ವರ್ಷಕ್ಕೆ ರಿಸರ್ವ್ ಬ್ಯಾಂಕು ಸರ್ಕಾರಕ್ಕೆ ನೀಡಿದ ಪಾಲಿಗೆ ಹೋಲಿಸಿದಲ್ಲಿ ಅರ್ಧಕ್ಕಿಂತ ಕಡಿಮೆಯಾಗಿದೆ. ನೋಟುನಿಷೇಧದಿಂದಾಗಿ ರಿಸರ್ವ್ ಬ್ಯಾಂಕು ಎಂದಿಗಿಂತ ಅಧಿಕ ವೆಚ್ಚ ಭರಿಸಬೇಕಾಗಿಬಂದದ್ದೇ ಇದಕ್ಕೆ ಪ್ರಧಾನ ಕಾರಣ. ಬ್ಯಾಂಕುಗಳಿಗೆ ಅಧಿಕ ಮೊತ್ತದಲ್ಲಿ ಹಣ ಹರಿದು ಬಂದಿದ್ದರಿಂದ ಬ್ಯಾಂಕುಗಳು ಅವೆಲ್ಲವನ್ನೂ ರಿಸರ್ವ್ ಬ್ಯಾಂಕಿನಲ್ಲಿ ಜಮಾ ಮಾಡಿದವು. ಮತ್ತು ರಿಸರ್ವ್ ಬ್ಯಾಂಕು ಜಮಾ ಆದ ಮೊತ್ತಕ್ಕೆ ಬ್ಯಾಂಕುಗಳಿಗೆ ಬಡ್ಡಿ ನೀಡಬೇಕಾಯಿತು.

ನೋಟುನಿಷೇಧದ ಪರವಾಗಿ ತೋರಿಸಲು ಸರ್ಕಾರದ ಬಳಿ ಏನೂ ಉಳಿದಿಲ್ಲ. ಭ್ರಷ್ಟಾಚಾರ ಮತ್ತು ಕಪ್ಪುಹಣಗಳು ವ್ಯವಸ್ಥೆಯ ಆಳದಲ್ಲಿ ಇರುವ ಸಮಸ್ಯೆಯಾಗಿದೆ. ಹೀಗಾಗಿ ಅದನ್ನು ಹೊರತುಪಡಿಸಿ ಕಪ್ಪುಹಣದ ಸಮಸ್ಯೆಯನ್ನು ನೀಡಲಾಗುವುದಿಲ್ಲ. ಜೊತೆಗೆ ಸಾಕಷ್ಟು ಸಮಾಲೋಚನೆಯನ್ನು ನಡೆಸದೆಯೇ ನೋಟುನಿಷೇಧವೆಂಬ ಕ್ರಮವನ್ನು ರೂಪಿಸಲಾಯಿತು ಮತ್ತು ಕಾರ್ಯಗತಗೊಳಿಸಲಾಯಿತು. ಕೆಲವರು ಮೊದಲಿನಿಂದಲೂ ಹೇಳುತ್ತಾ ಬಂದಂತೆ ಕಪ್ಪುಹಣ ಮತ್ತು ಅದರ ವಿರುದ್ಧದ ಹೋರಾಟವೆಂಬುದು ನಗದಿಗೆ ಸಂಬಂಧಪಟ್ಟ ವಿಚಾರವಲ್ಲ. ಸರ್ಕಾರವು ದೇಶದಲ್ಲಿ ನಡೆಯುವ ನಡೆಯುವ ಆರ್ಥಿಕ ವ್ಯವಹಾರಗಳ ಮೇಲೆ ಸರಿಯಾದ ಉಸ್ತುವಾರಿ ಇಟ್ಟುಕೊಳ್ಳಬೇಕು ಮತ್ತು ಅಗತ್ಯವಿದ್ದಾಗ ಅವುಗಳ ಮೇಲೆ ತೆರಿಗೆ ಹಾಕಲು ಮತ್ತು ನಿಗಾ ಇಟ್ಟುಕೊಳ್ಳಲು ಸಮರ್ಥವಿರಬೇಕು. ಇಂಥಾ ಕೆಲವು ಅಂಶಗಳನ್ನು ಸರಕು ಸೇವಾ ತೆರಿಗಾ ವ್ಯವಸ್ಥೆಯು (ಜಿಎಸ್ಟಿ) ಸ್ವಲ್ಪ ಮಟ್ಟಿಗೆ ನಿಯಂತ್ರಿಸುವ ಸಾಧ್ಯತೆ ಇದೆ. ಇದಲ್ಲದೆ ಖೋಟಾನೋಟುಗಳ ಹಾವಳಿಯಿಂದಾಗಿ ನೋಟುನಿಷೇದದ ಅಗತ್ಯ ಉಂಟಾಯಿತೆಂಬ ವಾದವು ಸರ್ಕಾರದ ಅತ್ಯಂತ ಅಪಕ್ವ ಧೋರಣೆಯನ್ನಷ್ಟೇ ಎತ್ತಿತೋರಿಸುತ್ತದೆ. ಖೋಟಾ ನೋಟುಗಳ ನಿಯಂತ್ರಣವೆಂಬುದು ಒಂದು ಸತತವಾಗಿ ನಡೆಯಬೇಕಾದ ನಿಗ್ರಹ ಮತ್ತು ನಿಯಂತ್ರಣಾ ಪ್ರಕ್ರಿಯೆ. ಒಂದು ಬಾರಿ ಮಾತ್ರ ನಡೆಸುವಂಥ ಯಾವುದೇ ನಾಟಕೀಯ ಕ್ರಮಗಳು ಅಸಮರ್ಪಕವಾಗಿಯೇ ಇರುತ್ತದೆ. ಆಗಿರುವ ಒಂದೇ ಬೆಳವಣಿಗೆಯೆಂದರೆ ನೇರ ತೆರಿಗೆ ಪಾವತಿಗಳ ಅರ್ಜಿ ಭರ್ತಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದು ಒಂದು ಬಾರಿ, ಅದೂ ಒಂದು ವಿಶೇಷ ಸಂದರ್ಭದಲ್ಲಿ ಮಾತ್ರ ಆಗಿರುವ ಹೆಚ್ಚಳವಾಗಿದ್ದರೂ ಗಮನಿಸಬೇಕಾದ ಬೆಳವಣಿಗೆಯಾಗಿದೆ. ಆದರೆ ನೇರ ತೆರಿಗೆ ಪಾವತಿ ಅರ್ಜಿ ಭರ್ತಿ ಮಾಡುವವರೆಲ್ಲಾ ನೇರೆ ತೆರಿಗೆ ಪಾವತಿ ಮಾಡಬೇಕಾದ ವ್ಯಾಪ್ತಿಗೆ ಬರುತ್ತಾರೆಂದು ಭಾವಿಸಬೇಕಿಲ್ಲ.

ನೋಟು ನಿಷೇಧದಿಂದ ಆಗಿರುವ ಸಾಧನೆಗಳ ಬಗೆಗಿನ ಸರ್ಕಾರದ ಹೇಳಿಕೆಗಳಿಗೆ ಯಾವುದೇ ಸಮರ್ಥನೆಗಳಿಲ್ಲ. ಅದನ್ನು ಮುಚ್ಚಿಟ್ಟುಕೊಳ್ಳಲು ಈಗ ಬ್ಯಾಂಕ್ ಖಾತೆಗಳಿಗೆ ಎಲ್ಲಾ ಹಣವು ವಾಪಸ್ ಬಂದಿರುವುದರಿಂದ ಅವುಗಳ ಬೆನ್ನುಹತ್ತಿ ಕಪ್ಪುಹಣ ಇಟ್ಟುಕೊಂಡವರನ್ನು ಶಿಕ್ಷಿಸುವುದಾಗಿ ಸರ್ಕಾರ ಹೇಳುತ್ತಿದೆ. ಇದನ್ನು ಸಾಧಿಸಬೇಕೆಂದರೆ ಸರ್ಕಾರವು ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯವನ್ನು ನೀಡಬೇಕಾಗುತ್ತದೆ. ಇದು ಸಾಕಷ್ಟು ಅಧಿಕಾರ ದುರ್ಬಳಕೆಗೂ ಅವಕಾಶವನ್ನು ಮಾಡಿಕೊಡುತ್ತದೆ. ವ್ಯವಸ್ಥೆಯಲ್ಲಿ ಆಳವಾಗಿ ಬೇರುಬಿಟ್ಟಿರುವ ಸಮಸ್ಯೆಗಳಿಗೆ ಸಮಗ್ರವಾದ ಮತ್ತು ಆಳವಾದ ಪರಿಹಾರವನ್ನು ಹುಡುಕದೆ ಕೇವಲ ಒಂದು ಬಾರಿ ನಡೆಸುವ ನಾಟಕೀಯವಾದ ಕ್ರಮಗಳಿಗೆ ಮುಂದಾಗುವ ಅಧ್ವಾನ ಧೋರಣೆಯನ್ನೇ ನೋಟುನಿಷೇಧದ ವೈಫಲ್ಯವೂ ತೋರಿಸುತ್ತಿದೆ. ಧೋರಣೆಯು ಮುಂದೆ  ಭಾರತಕ್ಕೆ ಮತ್ತು ಪ್ರಜಾತಂತ್ರಕ್ಕೆ ಮತ್ತಷ್ಟು ಆಪತ್ತನ್ನೇ ಉಂಟುಮಾಡಬಹುದಾದ ಹಾಗೂ ಮತ್ತಷ್ಟು ಬೇಕಾಬಿಟ್ಟಿ ಮತ್ತು ಅಪಾಯಕಾರಿ ನಿರ್ಧಾರಗಳಿಗೂ ಕಾರಣವಾಗಬಹುದು.

  \  ಕೃಪೆ: Economic and Political Weekly
              \Sep 2, 2017. Vol. 52. No. 35

                                                                                                





ಕಾಮೆಂಟ್‌ಗಳಿಲ್ಲ: